alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ರೋಲ್ ಮಾಡಿದವನಿಗೆ ಜಾಡಿಸಿದ್ದಾಳೆ ನಟಿ ತಾಪ್ಸಿ

ತಾಪ್ಸಿ ಪನ್ನು ತನೆಗೆ ಅನಿಸಿದ್ದನ್ನು ನೇರವಾಗಿ ಹೇಳೋ ಬಿಂದಾಸ್ ನಟಿ. ಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಲು ಕೂಡ ಆಕೆ ಹಿಂದೇಟು ಹಾಕಿಲ್ಲ. ಸಾಮಾಜಿಕ ತಾಣದಲ್ಲಿ ತಾಪ್ಸಿಗೆ ಟ್ರೋಲ್ ಮಾಡಿದ ಕಿಡಿಗೇಡಿಗೂ ಮಾತಿನ ಚಾಟಿ ಬೀಸಿದ್ದಾಳೆ.

ಇತ್ತೀಚೆಗಷ್ಟೆ ತಾಪ್ಸಿ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ಲು. ತನ್ನ ಸೆಕ್ಸೀ ಅವತಾರವನ್ನು ಟ್ವಿಟ್ಟರ್ ನಲ್ಲೂ ಅಪ್ಲೋಡ್ ಮಾಡಿದ್ಲು. ಈ ಫೋಟೋಗೆ ವ್ಯಕ್ತಿಯೊಬ್ಬ ಕೆಟ್ಟದಾಗಿ ಕಮೆಂಟ್ ಮಾಡಿದ್ದ.

ಸಾಮಾಜಿಕ ತಾಣದಲ್ಲಿ ಇಷ್ಟು ಕೊಳಕು ಅವತಾರದಲ್ಲಿ ಕಾಣಿಸಿಕೊಳ್ಬೇಡಿ. ಕೊಳಕು ಸಿನೆಮಾ ಮಾಡಿ ಯುವಜನತೆಯನ್ನು ಹಾಳು ಮಾಡ್ಬೇಡಿ ಅಂತಾ ಬರೆದಿದ್ದ. ಈ ಟ್ವೀಟ್ ಗೆ ತಾಪ್ಸಿ ಪನ್ನು ಸರಿಯಾಗೇ ತಿರುಗೇಟು ಕೊಟ್ಟಿದ್ದಾಳೆ.

ಮೈಮೇಲಿದ್ದ ಮರಳು ನೋಡಿ ನೀವು ಕೊಳಕು ಅಂದುಕೊಂಡಿರ್ಬೇಕು, ಇನ್ನೊಮ್ಮೆ ಮರಳನ್ನೆಲ್ಲ ಝಾಡಿಸಿ ನಂತರ ಫೋಟೋ ಕ್ಲಿಕ್ಕಿಸಿಕೊಳ್ತೇನೆ ಅಂತಾ ಅವನದೇ ಧಾಟಿಯಲ್ಲಿ ಪ್ರತಿಕ್ರಿಯಿಸಿದ್ದಾಳೆ.

 

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...