alex Certify
ಕನ್ನಡ ದುನಿಯಾ       Mobile App
       

Kannada Duniya

ಕೆಟ್ಟದಾಗಿ ಕಾಣುವ ಬಾಲಿವುಡ್ ನಟಿ ಯಾರಂತೆ ಗೊತ್ತಾ?

ಬಾಲಿವುಡ್‌ನಲ್ಲಿನ ಕೆಟ್ಟದಾಗಿ ಕಾಣಿಸುವ ನಟಿ ಎಂದರೆ ತಾಪ್ಸಿ ಪನ್ನು ಎಂದು ಟ್ವಿಟರ್‌ನಲ್ಲಿ ಟ್ರೋಲ್‌ ಮಾಡಿದ್ದಕ್ಕೆ ನಟಿ ತಾಪ್ಸಿ, ಖಡಕ್‌ ಉತ್ತರ ನೀಡಿದ್ದಾರೆ.

ಮುಂದಿನ ದಿನದಲ್ಲಿ ಇಂತಹ ನಟಿಯನ್ನು ಕಾಣುವುದು ಅನುಮಾನ. 2 ಅಥವಾ 3 ಸಿನಿಮಾಗಳ ಬಳಿಕ ಬಾಲಿವುಡ್‌ನಿಂದ ಖಚಿತವಾಗಿ ಗೇಟ್‌ಪಾಸ್‌ ಸಿಗುತ್ತದೆ ಎಂದು ಟ್ವಿಟರ್‌ನಲ್ಲಿ ಟ್ರೋಲ್‌ ಮಾಡಲಾಗಿತ್ತು.

ಇದಕ್ಕೆ ನಗುಮೊಗದ ಇಮೋಜಿಯ ಜತೆ ಉತ್ತರಿಸಿರುವ ತಾಪ್ಸಿ, ಮೂರು ಚಿತ್ರಗಳು ಈಗಾಗಲೇ ನಟಿಸಿ ಆಗಿದೆ. ಇದಲ್ಲದೆ ಮತ್ತೆರಡು ಸಿನಿಮಾಗಳಿಗೆ ನಾನು ಒಪ್ಪಿಕೊಂಡೂ ಆಗಿದೆ. ಸ್ವಲ್ಪ ಸಮಯ ಇನ್ನೂ ಕಾಯಬೇಕು ಎಂದು ಉತ್ತರಿಸಿದ್ದಾರೆ.

ಇದಕ್ಕೆ ನಿಮ್ಮ ಸಿನಿಮಾಗಳನ್ನು ನೋಡದಿದ್ದರೂ, ಚಿತ್ರರಂಗದಲ್ಲಿ ಹೇಗೆ ಓಡುತ್ತೆ ಎಂದು ಮತ್ತೆ ಟ್ರೋಲ್‌ ಹುಡುಗರು ಕೆದಕಿದ್ದಾರೆ. ನಟಿಯ ಕರ್ತವ್ಯ ನಾನು ನಿಭಾಯಿಸುತ್ತಿದ್ದೇನೆ. ನಿಮ್ಮ ಅಭಿರುಚಿಯನ್ನು ಕೊಂಚ ಸುಧಾರಿಸಿಕೊಳ್ಳುವುದು ಒಳ್ಳೆಯದು ಎಂದೂ ಟಾಂಗ್‌ ನೀಡಿದ್ದಾರೆ ತಾಪ್ಸಿ.

ತಾಪ್ಸಿ ಮೇಲೆ ಟ್ರೋಲ್‌ ಹುಡುಗರು ಆಗಾಗ್ಗೆ ಇಂತಹ ಕಮೆಂಟ್‌ಗಳನ್ನು ಮಾಡುತ್ತಿದ್ದು, ಇದಕ್ಕೆ ತಕ್ಕ ಉತ್ತರಗಳನ್ನು ನೀಡುವಲ್ಲಿ ನಟಿ ಯಶಸ್ವಿಯಾಗುತ್ತಿದ್ದಾರೆ. ರಿಶಿ ಕಪೂರ್‌ ಅವರ ಮುಲ್ಕ್‌ ಚಿತ್ರದಲ್ಲಿ ಅಭಿಷೇಕ್‌ ಬಚ್ಚನ್‌ ಅವರೊಂದಿಗೆ, ಅಮಿತಾಬ್‌ ಬಚ್ಚನ್‌ ಅವರೊಂದಿಗೆ ಬದ್ಲಾ, ಹಾಗೂ ವಿಕಿ ಕೌಶಲ್‌ ಜತೆ ಮನ್‌ಮರಾಜಿಯಾ ಚಿತ್ರದಲ್ಲಿ ತಾಪ್ಸಿ ಕಾಣಿಸಿಕೊಳ್ಳಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...