alex Certify
ಕನ್ನಡ ದುನಿಯಾ       Mobile App
       

Kannada Duniya

ಚಿರು, ಅಮಿತಾಬ್ ಚಿತ್ರದಲ್ಲಿ ಕಿಚ್ಚ ಸುದೀಪ್

ರಾಯಲಸೀಮಾ ಸ್ವಾತಂತ್ರ್ಯ ಹೋರಾಟಗಾರ ಉಯ್ಯಾಲವಾಡ ನರಸಿಂಹರೆಡ್ಡಿ ಅವರ ಜೀವನವನ್ನಾಧರಿಸಿ ತೆಲುಗಿನಲ್ಲಿ ನಿರ್ಮಾಣವಾಗುತ್ತಿರುವ ‘ಸೈರಾ ನರಸಿಂಹರೆಡ್ಡಿ’ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಮಾಡಲಾಗಿದೆ.

ಮೆಗಾಸ್ಟಾರ್ ಚಿರಂಜೀವಿ ನರಸಿಂಹರೆಡ್ಡಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿರು ಹುಟ್ಟುಹಬ್ಬದ ಪ್ರಯುಕ್ತ ಚಿತ್ರದ ಪೋಸ್ಟರ್ ರಿಲೀಸ್ ಮಾಡಲಾಗಿದ್ದು, ವಿಭಿನ್ನ ಲುಕ್ ಗಮನ ಸೆಳೆಯುವಂತಿದೆ.

ಚಿತ್ರದಲ್ಲಿ ಬಿಗ್ ಸ್ಟಾರ್ ಗಳು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಡೇರಿಂಗ್ ಸ್ಟಾರ್ ಜಗಪತಿ ಬಾಬು, ಸೇತುಪತಿ, ನಯನತಾರಾ ಅಭಿನಯಿಸಲಿದ್ದಾರೆ.

10 ವರ್ಷಗಳ ಬಳಿಕ ಚಿರಂಜೀವಿ ಮತ್ತೆ ಬಣ್ಣ ಹಚ್ಚಿದ್ದ ‘ಕೈದಿ ನಂ.150’ ಭಾರೀ ಯಶಸ್ಸು ಕಂಡಿತ್ತು. ಅದಾದ ಬಳಿಕ ‘ಸೈರಾ ನರಸಿಂಹರೆಡ್ಡಿ’ ಸೆಟ್ಟೇರಿದೆ.

ರಾಮ್ ಚರಣ್ ಹೋಂ ಪ್ರೊಡಕ್ಷನ್ ಬ್ಯಾನರ್ ಕೊನಿಡೆಲಾ ಪ್ರೊಡಕ್ಷನ್ ಕಂಪನಿ ನಿರ್ಮಾಣ ಮಾಡುತ್ತಿರುವ ಈ ಚಿತ್ರವನ್ನು ಸುರೇಂದರ್ ರೆಡ್ಡಿ ನಿರ್ದೇಶಿಸಲಿದ್ದಾರೆ. ಎ.ಆರ್. ರೆಹಮಾನ್ ಸಂಗೀತ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...