alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ವಿಜರ್ಲ್ಯಾಂಡ್ ನಲ್ಲಿ ನಟಿ ಶ್ರೀದೇವಿಯ ಪ್ರತಿಮೆ…!

ಬಾಲಿವುಡ್ ಸ್ಟಾರ್ ನಟಿ ಶ್ರೀದೇವಿ ಅವರ ಪ್ರತಿಮೆಯನ್ನು ಸ್ಥಾಪಿಸಲು ಸ್ವಿಜರ್ಲ್ಯಾಂಡ್ ಸರ್ಕಾರ ಚಿಂತನೆ ನಡೆಸಿದೆ.

ಮೋಹಕ ತಾರೆ ಶ್ರೀದೇವಿ ಅವರ ಸೂಪರ್ ಹಿಟ್ ಚಿತ್ರ ‘ಚಾಂದಿನಿ’ಯ ಚಿತ್ರಿಕರಣ ಸ್ವಿಜರ್ಲ್ಯಾಂಡ್ ನಲ್ಲಿ ನಡೆದಿತ್ತು. ಈ ಚಿತ್ರದ ಅರ್ಧದಷ್ಟು ಚಿತ್ರಿಕರಣ ಹಾಗೂ ಹಾಡುಗಳು ಸ್ವಿಸ್ ನಲ್ಲಿ ಶೂಟಿಂಗ್ ಮಾಡಲಾಗಿತ್ತು.

ಅಲ್ಲದೆ ಸ್ಟಾರ್ ನಟಿಯ ಹಲವು ಚಿತ್ರಗಳಲ್ಲಿ ಸ್ವಿಜರ್ಲ್ಯಾಂಡ್ ಸುಂದರ ತಾಣಗಳನ್ನು ಸೆರೆ ಹಿಡಿಯಲಾಗಿದೆ. ಇದ್ರಿಂದ ಸ್ವಿಸ್ ನ ಪ್ರವಾಸೋದ್ಯಮ ಬೆಳವಣಿಗೆಗೆ ಸಹಾಯಕವಾಗಿದೆ. ಹೀಗಾಗಿ ಸ್ಟಾರ್ ನಟಿಯ ಪ್ರತಿಮೆಯನ್ನು ನಿರ್ಮಿಸುವ ಪ್ಲಾನ್ ಮಾಡಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಬಾಲಿವುಡ್ ನ ಖ್ಯಾತ ನಿರ್ದೇಶಕ ಯಶ್ ಚೋಪ್ರಾ ಅವರ ಪ್ರತಿಮೆಯನ್ನು 2016ರಲ್ಲಿ ಸ್ವಿಜರ್ಲ್ಯಾಂಡ್ ನ ಇಂಟರ್ ಲೇಕ್ ಬಳಿ ಸ್ಥಾಪಿಸಲಾಗಿತ್ತು. ಚೋಪ್ರಾ ಅವರ ಕೊನೆಯ ಚಿತ್ರ ‘ಜಬ್ ತಕ್ ಹೈ ಜಾನ್’ ಸಹ ಸ್ವಿಸ್ ನಲ್ಲಿ ಶೂಟಿಂಗ್ ಆಗಿದ್ದನ್ನು ಸ್ಮರಿಸಬಹುದು.

ಸ್ವಿಜರ್ಲ್ಯಾಂಡ್ ಬಾಲಿವುಡ್ ನಿರ್ದೇಶಕರ ನೆಚ್ಚಿನ ಶೂಟಿಂಗ್ ತಾಣಗಳಲ್ಲಿ ಒಂದು. ಶ್ರೀದೇವಿ ಅವರು ನಾಲ್ಕು ದಶಕಗಳ ಕಾಲ ಬೆಳ್ಳಿ ತೆರೆಯ ಮೇಲೆ ನಟಿಸಿ ಅಭಿಮಾನಿಗಳನ್ನು ರಂಜಿಸಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...