alex Certify
ಕನ್ನಡ ದುನಿಯಾ       Mobile App
       

Kannada Duniya

ಆಘಾತಕಾರಿ ಮಾಹಿತಿ ಬಿಚ್ಚಿಟ್ಟ ಬಾಲಿವುಡ್ ನಟಿ

swara-bhaskar-5668385eb6222_l

‘ಪ್ರೇಮ್ ರತನ್ ಧನ್ ಪಾಯೋ’ ಚಿತ್ರದ ಪ್ರಮೋಷನ್ ಸಂದರ್ಭದಲ್ಲಿ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಗೆ ಕಹಿ ಅನುಭವೊಂದು ಆಗಿದೆ. ಈ ವಿಷಯವನ್ನು ಸ್ವರಾ ತಡವಾಗಿ ಬಹಿರಂಗಪಡಿಸಿದ್ದಾರೆ. ‘ಪ್ರೇಮ್ ರತನ್ ಧನ್ ಪಾಯೋ’ ಚಿತ್ರದ ಪ್ರಮೋಷನ್ ಗಾಗಿ ಸಲ್ಮಾನ್ ಖಾನ್ ಜೊತೆಗೆ ಸ್ವರಾ ಭಾಸ್ಕರ್ ರಾಜ್ಕೋಟ್ ಗೆ ಬಂದಿದ್ರು.

ರಾಜ್ಕೋಟ್ ಏರ್ಪೋರ್ಟ್ ನಲ್ಲಿ ಸಲ್ಮಾನ್ ಖಾನ್ ರನ್ನು ನೋಡಲು 2000ಕ್ಕೂ ಅಧಿಕ ಮಂದಿ ಸೇರಿದ್ರು. ಸಲ್ಲು ಜೊತೆ ನಟಿ ಸ್ವರಾ ಭಾಸ್ಕರ್ ಕೂಡ ಇದ್ದಿದ್ದು ನೋಡಿ ಅಭಿಮಾನಿಗಳು ಅತಿರೇಕದ ವರ್ತನೆ ತೋರಿದ್ದಾರೆ. ವ್ಯಕ್ತಿಯೊಬ್ಬ ಸ್ವರಾಳನ್ನು ಎಳೆದಾಡಿದ್ದಾನಂತೆ. ಬರಸೆಳೆದು ತಬ್ಬಿಕೊಳ್ಳಲು ಯತ್ನಿಸಿದ್ದಾನೆ.

ಜನಸಂದಣಿ ಇದ್ದಿದ್ರಿಂದ ಈ ವಿಚಾರ ಯಾರ ಗಮನಕ್ಕೂ ಬಂದಿರಲಿಲ್ಲ. ನಟ ಅನುಪಮ್ ಖೇರ್ ಸ್ವರಾಳನ್ನು ಕಾರಿನಲ್ಲಿ ಕೂರಿಸಿ ಕಳಿಸಿಕೊಟ್ಟಿದ್ದಾರಂತೆ. ಎಷ್ಟೋ ಬಾರಿ ದೆಹಲಿಯಲ್ಲೂ ಸ್ವರಾಗೆ ಇಂತಹ ಕೆಟ್ಟ ಅನುಭವಾಗಿದೆಯಂತೆ. ಹಲವು ಕಾಮುಕರಿಗೆ ಈ ನಟಿ ಕಪಾಳಮೋಕ್ಷ ಕೂಡ ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...