alex Certify
ಕನ್ನಡ ದುನಿಯಾ       Mobile App
       

Kannada Duniya

ಕುಡಿದ ಮತ್ತಿನಲ್ಲಿ ಈ ನಟಿ ರೂಮಿಗೆ ಹೋಗಿದ್ನಂತೆ ನಿರ್ದೇಶಕ

ಅನೇಕ ದಿನಗಳಿಂದ ಹಾಲಿವುಡ್ ಹಾಗೂ ಬಾಲಿವುಡ್ ಕಲಾವಿದೆಯರು ತಮಗಾದ ಲೈಂಗಿಕ ಕಿರುಕುಳವನ್ನು ಬಹಿರಂಗಪಡಿಸ್ತಿದ್ದಾರೆ. ಬಾಲಿವುಡ್ ನ ಮತ್ತೊಬ್ಬ ಬೆಡಗಿ ಈಗ ತನಗಾದ ಲೈಂಗಿಕ ಕಿರುಕುಳವನ್ನು ಬಹಿರಂಗಪಡಿಸಿದ್ದಾಳೆ. ವೀರ್ ದಿ ವೆಡ್ಡಿಂಗ್ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಿರುವ ಸ್ವರಾ ಭಾಸ್ಕರ್ ತನಗಾದ ಲೈಂಗಿಕ ಕಿರುಕುಳವನ್ನು ಎಲ್ಲರ ಮುಂದೆ ಹೇಳಿದ್ದಾಳೆ.

ಮುಂಬೈ ಮಿರರ್ ಪತ್ರಿಕೆ ಜೊತೆ ಮಾತನಾಡಿದ ಸ್ವರಾ ಭಾಸ್ಕರ್ ಬಾಲಿವುಡ್ ಗೆ ಬಂದ ಆರಂಭದ ದಿನದಲ್ಲಿ ನಿರ್ದೇಶಕರೊಬ್ಬರು ನನಗೆ ಕಿರುಕುಳ ನೀಡಿದ್ದರು ಎಂದು ಸ್ವರಾ ಹೇಳಿದ್ದಾಳೆ. ಬಾಲಿವುಡ್ ನ ಆರಂಭದ ಚಿತ್ರವಾಗಿತ್ತು. ದೂರದೂರಿನಲ್ಲಿ ಶೂಟಿಂಗ್ ನಡೆಯುತ್ತಿತ್ತು. ಸುಮಾರು 50 ದಿನಗಳ ಕಾಲ ಚಿತ್ರೀಕರಣ ನಡೆದಿತ್ತು. ಈ ವೇಳೆ ಆ ಚಿತ್ರದ ನಿರ್ದೇಶಕರು ನನ್ನ ಹಿಂದೆ ಮುಂದೆ ತಿರುಗಾಡುತ್ತಿದ್ದರು. ರಾತ್ರಿ ಫೋನ್ ಮಾಡಿ, ಸಂದೇಶ ಕಳುಹಿಸಿ ಕಿರಿಕಿರಿ ಮಾಡುತ್ತಿದ್ದರು.

ಶೂಟಿಂಗ್ ಬಗ್ಗೆ ಚರ್ಚೆ ನಡೆಸುವ ನೆಪದಲ್ಲಿ ತನ್ನ ರೂಮಿಗೆ ನನ್ನನ್ನು ಕರೆಯಿಸಿಕೊಂಡಿದ್ದರು. ಈ ವೇಳೆ ರೂಮಿನಲ್ಲಿ ನಿರ್ದೇಶಕರು ಮದ್ಯ ಸೇವನೆ ಮಾಡುತ್ತಿದ್ದರು. ಆರಂಭದಲ್ಲಿಯೇ ಪ್ರೀತಿ ಸೆಕ್ಸ್ ಬಗ್ಗೆ ಮಾತನಾಡ್ತಿದ್ದ ನಿರ್ದೇಶಕರು ಒಂದು ದಿನ ನನ್ನ ರೂಮಿಗೆ ಬಂದು ಹಗ್ ಮಾಡುವ ಬಗ್ಗೆ ಮಾತನಾಡಿದ್ದರು ಎಂದಿದ್ದಾಳೆ ಸ್ವರಾ ಭಾಸ್ಕರ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...