alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್ ಸಂಗತಿ ಬಿಚ್ಚಿಟ್ಟ ಮಾಜಿ ವಿಶ್ವ ಸುಂದರಿ

ಬಾಲಿವುಡ್ ಸೆಲೆಬ್ರಿಟಿಗಳು ಸಾಮಾನ್ಯವಾಗಿ ತಮ್ಮ ರಕ್ಷಣೆಗಾಗಿ ಬಾಡಿಗಾರ್ಡ್ ಗಳನ್ನು ನೇಮಿಸಿಕೊಂಡಿರುತ್ತಾರೆ. ಸಾರ್ವಜನಿಕ ಸಮಾರಂಭಗಳಿಗೆ ತೆರಳಿದ ವೇಳೆ ಅಭಿಮಾನಿಗಳಿಂದ ಈ ಸೆಲೆಬ್ರಿಟಿಗಳನ್ನು ಬಾಡಿಗಾರ್ಡ್ ಗಳು ರಕ್ಷಿಸುತ್ತಾರೆ.

ಇಷ್ಟೆಲ್ಲಾ ರಕ್ಷಣೆ ಇದ್ದರೂ ಕೆಲವೊಮ್ಮೆ ಕಿಡಿಗೇಡಿಗಳು ಅನುಚಿತವಾಗಿ ವರ್ತಿಸುವುದುಂಟು. ಅದರಲ್ಲೂ ನಟಿಯರು ಅಭಿಮಾನಿಗಳ ನಡುವೆ ಸಿಕ್ಕಿ ಬಿದ್ದ ವೇಳೆ ಇದೇ ಸಂದರ್ಭ ಸಾಧಿಸಿ ಕೆಲವರು ತಮ್ಮ ವಿಕೃತಿ ಮೆರೆಯುತ್ತಾರೆ. ಅಂತಹುದೇ ಒಂದು ಶಾಕಿಂಗ್ ಸಂಗತಿಯನ್ನು ಮಾಜಿ ವಿಶ್ವ ಸುಂದರಿ, ಬಾಲಿವುಡ್ ನಟಿ ಸುಶ್ಮಿತಾ ಸೇನ್ ಮಾಧ್ಯಮವೊಂದರ ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ.

ಆರು ತಿಂಗಳ ಹಿಂದೆ ಸುಶ್ಮಿತಾ ಸೇನ್, ಪ್ರಶಸ್ತಿ ವಿತರಣಾ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದರಂತೆ. ಸಮಾರಂಭದ ಬಳಿಕ ಅವರು ಹೊರ ಬರುವ ವೇಳೆ ಅಭಿಮಾನಿಗಳು ಸುತ್ತುವರಿದಿದ್ದಾರೆ. ಸುಷ್ಮಿತಾ ರಕ್ಷಣೆಗೆ ಹತ್ತು ಮಂದಿ ಬಾಡಿಗಾರ್ಡ್ ಗಳಿದ್ದರೂ ಸಮಯ ಸಾಧಿಸಿದ ಕಿಡಿಗೇಡಿಯೊಬ್ಬ ಹಿಂದಿನಿಂದ ಅನುಚಿತವಾಗಿ ಸ್ಪರ್ಶಿಸಿದ್ದಾನೆ.

ಸುಶ್ಮಿತಾ ಸುತ್ತ ಭಾರಿ ಸಂಖ್ಯೆಯಲ್ಲಿ ಜನ ಇದ್ದ ಕಾರಣ ತನ್ನ ಕೃತ್ಯ ಯಾರಿಗೂ ಗೊತ್ತಾಗುವುದಿಲ್ಲ ಎಂದು ಆತ ಭಾವಿಸಿದ್ದ. ಆದರೆ ಅನುಚಿತ ಸ್ಪರ್ಶದ ಅರಿವು ಸುಶ್ಮಿತಾರಿಗೆ ಆಗುತ್ತಿದ್ದಂತೆ ಕಿಡಿಗೇಡಿಯ ಕೈಗಳನ್ನು ಹಿಡಿದುಕೊಂಡಿದ್ದಾರೆ. ಬಳಿಕ ಹಿಂದೆ ತಿರುಗಿದ ಅವರಿಗೆ ಆಘಾತವಾಗಿತ್ತು. ಏಕೆಂದರೆ ಅನುಚಿತವಾಗಿ ಸ್ಪರ್ಶಿಸಿದವನು ಕೇವಲ ಹದಿನೈದು ವರ್ಷದ ಬಾಲಕನಾಗಿದ್ದ.

ಆತನನ್ನು ತರಾಟೆಗೆ ತೆಗೆದುಕೊಂಡ ಸುಶ್ಮಿತಾ, ನಾನು ಈ ಸಂಗತಿಯನ್ನು ಹೇಳಿದರೆ ಪರಿಣಾಮ ಏನಾಗುತ್ತದೆ ಗೊತ್ತಾ…? ಎಂದು ಕೇಳಿದ್ದಾರೆ. ಮೊದ ಮೊದಲು ತಾನು ಅಂತಹ ಕೃತ್ಯ ಮಾಡಿಲ್ಲವೆಂದು ಹೇಳಿದ ಬಾಲಕ, ಬಳಿಕ ತಪ್ಪೊಪ್ಪಿಕೊಂಡಿದ್ದಾನೆ. ಆತ ಇನ್ನೂ ಚಿಕ್ಕ ವಯಸ್ಸಿನವನು ಎಂಬ ಕಾರಣಕ್ಕೆ ತಾವು ಕ್ಷಮಿಸಿದ್ದಾಗಿ ಸುಶ್ಮಿತಾ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...