alex Certify
ಕನ್ನಡ ದುನಿಯಾ       Mobile App
       

Kannada Duniya

ಮಗಳ ಜೊತೆ ಸುಷ್ಮಿತಾ ಸೇನ್ ಜಾಲಿ ಜಾಲಿ….

sushmita_640x480_81490523218

ನಟಿ ಸುಷ್ಮಿತಾ ಸೇನ್ 41 ರ ಹರೆಯದಲ್ಲೂ ಫಿಟ್ & ಫೈನ್ ಆಗಿದ್ದಾರೆ. ಅವರ ಬಳುಕುವ ಮೈಮಾಟದ ಹಿಂದಿನ ಸೀಕ್ರೆಟ್ ಏನು ಗೊತ್ತಾ? ಡಾನ್ಸ್. ಹೌದು ಸುಷ್ಮಿತಾಗೆ ಡಾನ್ಸ್ ಅಂದ್ರೆ ತುಂಬಾನೇ ಇಷ್ಟವಂತೆ. 7 ವರ್ಷದ ಮಗಳು ಅಲೀಸಾಗೂ ಅಮ್ಮನಂತೆ ಡಾನ್ಸ್ ಕ್ರೇಝ್ ಶುರುವಾಗಿದೆ.

ಇಬ್ಬರೂ ಜೊತೆಯಾಗಿ ‘ಶೇಪ್ ಆಫ್ ಯೂ’ ಹಾಡಿಗೆ ಸೊಂಟ ಬಳುಕಿಸಿದ್ದಾರೆ. ಅಲೀಸಾ ಕೂಡ ಅಮ್ಮನಿಗಿಂತ ಕಮ್ಮಿಯೇನಿಲ್ಲ. ಸಖತ್ತಾಗೇ ಸ್ಟೆಪ್ ಹಾಕಿದ್ದಾಳೆ. ಮಕ್ಕಳ ಜೊತೆ ಬೀಚ್ ಗಳಲ್ಲಿ ರಜೆಯ ಮಜಾ ಅನುಭವಿಸಿರುವ ಸುಷ್ಮಿತಾ ಈ ವಿಡಿಯೋವನ್ನು ಇನ್ ಸ್ಟಾಗ್ರಾಮ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ.

ಕೆಲ ದಿನಗಳ ಹಿಂದಷ್ಟೆ ಹಿರಿಯ ಮಗಳು ರೆನೀ ಹಾಲಿವುಡ್ ಹಾಡು ಹಾಡಿರೋ ವಿಡಿಯೋ ಒಂದನ್ನು ಸುಷ್ಮಿತಾ ಅಪ್ ಲೋಡ್ ಮಾಡಿದ್ದರು. ರೆನೀ ಹಾಗೂ ಅಲೀಸಾ, ಸುಷ್ಮಿತಾ ಸೇನ್ ರ ದತ್ತು ಪುತ್ರಿಯರು. ಈಗಾಗ್ಲೇ ಇಬ್ಬರೂ ಸಾಮಾಜಿಕ ತಾಣಗಳಲ್ಲಿ ಭಾರೀ ಪಾಪ್ಯುಲರ್ ಆಗಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...