alex Certify
ಕನ್ನಡ ದುನಿಯಾ       Mobile App
       

Kannada Duniya

ಸುಳ್ಳು ಪ್ರಚಾರ ಮಾಡಲು ಒಲ್ಲೆ ಎಂದು 15 ಕೋಟಿ ರೂ. ಆಫರ್ ತಿರಸ್ಕರಿಸಿದ ನಟ

ಫೇರ್ನೆಸ್ ಕ್ರೀಂಗಳ ಬಗ್ಗೆ ಬಾಲಿವುಡ್ ನ ಅನೇಕ ಕಲಾವಿದರು ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕ್ರೀಂ ಹಚ್ಚಿ ಬೆಳ್ಳಗಾಗ್ತೀರಿ ಎಂಬ ಜಾಹೀರಾತಿನಲ್ಲಿ ನಟಿಸಲು ಒಲ್ಲೆ ಎಂದಿದ್ದಾರೆ. ಈಗ ಇದೇ ಸಾಲಿಗೆ ಇನ್ನೊಬ್ಬ ನಟನ ಸೇರ್ಪಡೆಯಾಗಿದೆ.

ಎಂ.ಎಸ್. ಧೋನಿ ಚಿತ್ರದ ಮೂಲಕ ಕೋಟ್ಯಾಂತರ ಅಭಿಮಾನಿಗಳ ಮನ ಗೆದ್ದಿರುವ ಸುಶಾಂತ್ ಸಿಂಗ್, ಫೇರ್ನೆಸ್ ಕ್ರೀಂ ಜಾಹೀರಾತಿನಲ್ಲಿ ನಟಿಸೋದಿಲ್ಲ ಎಂದಿದ್ದಾರೆ. ಅನೇಕರು ನನ್ನನ್ನು ಫಾಲೋ ಮಾಡ್ತಾರೆ. ಅವರಿಗೆ ಮೋಸ ಮಾಡಲು ನನಗೆ ಇಷ್ಟವಿಲ್ಲ. ಭರವಸೆಯಿಲ್ಲದ ಕಂಪನಿ ಬಗ್ಗೆ ನಾನು ಪ್ರಚಾರ ಮಾಡಲ್ಲ ಎಂದಿದ್ದಾರೆ. ಈ ಮೂಲಕ 15 ಕೋಟಿ ಆಫರನ್ನು ನಗ್ತಾ ನಗ್ತಾ ಹಿಂದಿರುಗಿಸಿದ್ದಾರೆ.

ನಟಿ ಕಂಗನಾ ಕೂಡ ಇಂಥ ಜಾಹೀರಾತಿನಲ್ಲಿ ನಟಿಸಲು ನಿರಾಕರಿಸಿದ್ದಾಳೆ. ಶಾರುಕ್ ಖಾನ್, ಆಲಿಯಾ ಭಟ್, ಜಾನ್ ಅಬ್ರಾಹಂ ಸೇರಿದಂತೆ ಅನೇಕರು ಫೇರ್ನೆಸ್ ಕ್ರೀಂ ಜಾಹೀರಾತಿನಲ್ಲಿ ಕಾಣಿಸಿಕೊಳ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...