alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಹಿದ್ ಗೆ ಸಿಕ್ತು ಪ್ರಶಸ್ತಿ : ಉರಿದುಕೊಂಡ ಸುಶಾಂತ್

download

ಶನಿವಾರವಷ್ಟೇ ನ್ಯೂಯಾರ್ಕ್ ನಲ್ಲಿ ಐಫಾ ಪ್ರಶಸ್ತಿ ಪ್ರಧಾನ ಸಮಾರಂಭ ನಡೆದಿದೆ. ಐಫಾ ಪ್ರಶಸ್ತಿ ವಿಚಾರದಲ್ಲಿ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅಸಮಾಧಾನಗೊಂಡಿದ್ದಾನೆ. ನ್ಯೂಯಾರ್ಕ್ ನಲ್ಲಿ ನಡೆದ ಸಮಾರಂಭದಲ್ಲಿ ಸುಶಾಂತ್ ಭಾಗಿಯಾಗಿದ್ದ. ಆದ್ರೆ ಯಾವುದೇ ಪ್ರಶಸ್ತಿ ಸಿಕ್ಕಿಲ್ಲ. ಇದೇ ಸುಶಾಂತ್ ಅಸಮಾಧಾನಕ್ಕೆ ಕಾರಣ.  ಸುಶಾಂತ್ ತನ್ನ ಅಸಮಾಧಾನವನ್ನು ಟ್ವೀಟರ್ ಮೂಲಕ ಹೇಳಿಕೊಂಡಿದ್ದಾನೆ.

ಬಾಲಿವುಡ್ ನಟ ಶಾಹಿದ್ ಕಪೂರ್ ಗೆ ಬೆಸ್ಟ್ ನಟ ಪ್ರಶಸ್ತಿ ಬಂದಿದೆ. ಉಡ್ತಾ ಪಂಜಾಬ್ ಚಿತ್ರಕ್ಕಾಗಿ ಶಾಹಿದ್ ಈ ಪ್ರಶಸ್ತಿ ಪಡೆದಿದ್ದಾರೆ. ಎಂ.ಎಸ್. ಧೋನಿ ಚಿತ್ರಕ್ಕೆ ತನಗೆ ಪ್ರಶಸ್ತಿ ಸಿಗುತ್ತೆ ಎಂದು ಸುಶಾಂತ್ ಭಾವಿಸಿದ್ದರು. ಆದ್ರೆ ಶಾಹಿದ್ ಗೆ ಸಿಕ್ಕಿರೋದನ್ನು ಸುಶಾಂತ್ ಗೆ ಸಹಿಸಿಕೊಳ್ಳಲಾಗ್ತಿಲ್ಲ.

ಶಾಹಿದ್ ಗೆ ಪ್ರಶಸ್ತಿ ಸಿಕ್ಕ ಕೆಲವೇ ಕ್ಷಣಗಳಲ್ಲಿ ಟ್ವೀಟರ್ ನಲ್ಲಿ ಐಫಾ ಹಹಹ ಎಂದು ಟ್ವಿಟ್ ಮಾಡಿದ್ದಾನೆ ಸುಶಾಂತ್. ಸುಶಾಂತ್ ಈ ಟ್ವಿಟ್ ಗೆ ಸಾಕಷ್ಟು ಪ್ರತಿಕ್ರಿಯೆಗಳು ಬರ್ತಾ ಇವೆ. ಅನೇಕರು ಸುಶಾಂತ್ ಟ್ವಿಟ್ ಗೆ ವಿರೋಧ ವ್ಯಕ್ತಪಡಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...