alex Certify
ಕನ್ನಡ ದುನಿಯಾ       Mobile App
       

Kannada Duniya

ವೃತ್ತಿಯಲ್ಲಿ ಮುಳುಗುತ್ತಿರುವ ಶಾರುಕ್ ಗೆ ದೋಣಿಯಾಗೋರು ಯಾರು?

ಬಾಲಿವುಡ್ ಬಾದ್ ಶಾ ಶಾರುಕ್ ಖಾನ್ ಅಭಿನಯದ ದಿಲ್ವಾಲೆ, ಫ್ಯಾನ್, ಜಬ್ ಹ್ಯಾರಿ ಮೆಟ್ ಸೇಜಲ್ ಚಿತ್ರಗಳು ನಿರೀಕ್ಷಿಸಿದಷ್ಟು ಯಶಸ್ಸು ಕಾಣಲಿಲ್ಲ. ಇದು ಶಾರುಕ್ ಭಯಕ್ಕೆ ಕಾರಣವಾಗಿದೆ. ವೃತ್ತಿಯಲ್ಲಿ ಹಿನ್ನೆಡೆ ಅನುಭವಿಸುತ್ತಿರುವ ಶಾರುಕ್ ಹಳೆ ಸ್ನೇಹಿತನ ನೆನಪು ಮಾಡಿಕೊಂಡಿದ್ದಾರೆ.

ಶಾರುಕ್ ಖಾನ್ ಹಳೆ ಸ್ನೇಹಿತ ಆದಿತ್ಯ ಚೋಪ್ರಾರನ್ನು ಭೇಟಿಯಾಗಿದ್ದಾರೆಂದು ಮೂಲಗಳು ಹೇಳಿವೆ. ಪತ್ರಿಕೆಯೊಂದರಲ್ಲಿ ಪ್ರಕಟವಾದ ಸುದ್ದಿ ಪ್ರಕಾರ, ಶಾರುಕ್ ಖಾನ್ ಧೂಮ್ 4ನಲ್ಲಿ ನಟಿಸುವ ಆಸಕ್ತಿ ಹೊಂದಿದ್ದಾರೆ ಎನ್ನಲಾಗಿದೆ. ಯಶ್ ಬ್ಯಾನರ್ ನಲ್ಲಿ ಧೂಮ್ 4 ನಿರ್ಮಾಣವಾಗುತ್ತಿದೆ.

ಧೂಮ್ -4 ಸ್ಕ್ರಿಪ್ಟ್ ಮೇಲೆ ಆದಿತ್ಯ ವರ್ಕ್ ಮಾಡ್ತಿದ್ದಾರೆ. ಧೂಮ್ ನ ಮೂರು ಸರಣಿ ಹಿಟ್ ಆಗಿದ್ದು, ಧೂಮ್ -4 ಮೇಲೂ ನಿರೀಕ್ಷೆ ಹೆಚ್ಚಿದೆ. ಈ ಬಾರಿ ಅಭಿಷೇಕ್ ಬಚ್ಚನ್ ಹಾಗೂ ಉದಯ್ ಚೋಪ್ರಾಗೆ ವಿರಾಮ ಸಿಗುವ ಸಾಧ್ಯತೆಯಿದೆ. ಚಿತ್ರದಲ್ಲಿ ಶಾರುಕ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ. ಆದ್ರೆ ಈವರೆಗೂ ಯಾವುದೇ ಅಧಿಕೃತ ಮೂಲ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...