alex Certify
ಕನ್ನಡ ದುನಿಯಾ       Mobile App
       

Kannada Duniya

ಶೂಟಿಂಗ್ ವೇಳೆ ರಜನಿಕಾಂತ್ ಕಾಲಿಗೆ ಪೆಟ್ಟು

rajnikant-sun

ಚೆನ್ನೈ: ಭಾರೀ ನಿರೀಕ್ಷೆಯ ‘ರೋಬೋ 2.0’ ಚಿತ್ರೀಕರಣದ ವೇಳೆ ಸೂಪರ್ ಸ್ಟಾರ್ ರಜನಿಕಾಂತ್ ಆಯತಪ್ಪಿ ಬಿದ್ದಿದ್ದು, ಅವರ ಮೊಣಕಾಲಿಗೆ ಪೆಟ್ಟಾಗಿದೆ.

ಚೆನ್ನೈನ ಇ.ಸಿ.ಆರ್. ರಸ್ತೆಯಲ್ಲಿ ಸೆಟ್ ಹಾಕಿ ಚಿತ್ರೀಕರಣ ನಡೆಸಲಾಗುತ್ತಿತ್ತು. ಸಾಹಸ ದೃಶ್ಯಗಳ ಚಿತ್ರೀಕರಣದ ಸಂದರ್ಭದಲ್ಲಿ ರಜನಿಕಾಂತ್ ಆಯತಪ್ಪಿ ಬಿದ್ದು ಸಣ್ಣ ಪೆಟ್ಟಾಗಿದ್ದು, ಕೂಡಲೇ ಅವರನ್ನು ಕೇಳಂಬಾಕಂನಲ್ಲಿರುವ ಚೆಟ್ಟಿನಾಡು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಚಿಕಿತ್ಸೆ ಬಳಿಕ ವೈದ್ಯರು ವಿಶ್ರಾಂತಿಗೆ ಸಲಹೆ ನೀಡಿದ್ದರಿಂದ ರಜನಿಕಾಂತ್ ಮನೆಗೆ ತೆರಳಿದ್ದು, ಚಿತ್ರೀಕರಣ ಸ್ಥಗಿತಗೊಳಿಸಲಾಗಿದೆ.

ಶಂಕರ್ ನಿರ್ದೇಶನ, ಎ.ಆರ್. ರೆಹಮಾನ್ ಸಂಗೀತ ನೀಡಿರುವ ‘2.0’ ಬಹುಕೋಟಿ ವೆಚ್ಛದಲ್ಲಿ ಅದ್ಧೂರಿಯಾಗಿ ನಿರ್ಮಾಣವಾಗುತ್ತಿದೆ. ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಮೊದಲಾದವರು ಅಭಿನಯಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...