alex Certify
ಕನ್ನಡ ದುನಿಯಾ       Mobile App
       

Kannada Duniya

ಕೇರಳ ಪ್ರವಾಹ ಸಂತ್ರಸ್ತರಿಗೆ ಬರೋಬ್ಬರಿ 14 ಕೋಟಿ ರೂ. ನೀಡಿದ ನಟ

ತಿರುವನಂತಪುರಂ: ಮಹಾ ಮಳೆ ಹಾಗೂ ಭೀಕರ ಪ್ರವಾಹಕ್ಕೆ ತುತ್ತಾಗಿ ನಲುಗಿ ಹೋಗಿರುವ ಕೇರಳದ ಸಂತ್ರಸ್ತರಿಗೆ ನೆರವಿನ ಮಹಾಪೂರವೆ ಹರಿದುಬರುತ್ತಿದೆ. ಕಾಲಿವುಡ್, ಟಾಲಿವುಡ್, ಸ್ಯಾಂಡಲ್ ವುಡ್ ನ ನಟ-ನಟಿಯರು ಕೂಡ ನೆರವಿನ ಹಸ್ತ ಚಾಚಿದ್ದಾರೆ. ಕಾಲಿವುಡ್ ನಟ ವಿಜಯ್ ಬರೋಬ್ಬರಿ 14 ಕೋಟಿ ರೂ. ಪರಿಹಾರ ಧನ ನೀಡಿದ್ದಾರೆ. ಪ್ರವಾಹ ಸಂತ್ರಸ್ತರ ಸಂಕಷ್ಟಕ್ಕೆ ವಿಜಯ್ ಮೆರೆದಿರುವ ಮಾನವೀಯ ಕೊಡುಗೆ ಮೆಚ್ಚುಗೆಗೆ ಪಾತ್ರವಾಗಿದೆ.

ಕೇರಳ ಪ್ರವಾಹ ನಿಧಿಗೆ ಹಲವಾರು ನಟ-ನಟಿಯರು ಕೈಲಾದ ಸಹಾಯ ಮಾಡಿದ್ದು, ಟಾಲಿವುಡ್ ನ ರಾಮ್‍ಚರಣ್ ತೇಜ -60 ಲಕ್ಷ ರೂ., ಔಷಧಿ, ಆಹಾರ, ರಾಮ್ ಚರಣ್ ಪತ್ನಿ ಉಪಾಸನಾ 1.2 ಕೋಟಿ ರೂ., ಪ್ರಭಾಸ್- 1 ಕೋಟಿ ರೂ. ಹಾಗೂ ಕಾಲಿವುಡ್ ನಟ ಸೂರ್ಯ ಮತ್ತು ಕಾರ್ತೀ 35 ಲಕ್ಷ ರೂ., ಅಲ್ಲು ಅರ್ಜುನ್ 25 ಲಕ್ಷ ರೂ., ನಟ ವಿಜಯ್ ದೇವರಕೊಂಡ 5 ಲಕ್ಷ ರೂಪಾಯಿ ಹಾಗೂ ನಟಿ ಅನುಪಮ 1 ಲಕ್ಷ ರುಪಾಯಿ ಪರಿಹಾರ ನೀಡಿ ಮಾನವೀಯತೆ ತೋರಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...