alex Certify
ಕನ್ನಡ ದುನಿಯಾ       Mobile App
       

Kannada Duniya

ವಿದೇಶ ಪ್ರವಾಸಕ್ಕೆ ಹೋಗಲು ರಜನಿಕಾಂತ್ ಗೂ ಬೇಕು ಪಾಸ್ ಪೋರ್ಟ್

rajnikanth

ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ‘ಕಬಾಲಿ’ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರೀಕರಣಕ್ಕಾಗಿ ಅವರು ಮಲೇಷ್ಯಾಕ್ಕೆ ತೆರಳಿದ್ದಾರೆ. ಫೆಬ್ರವರಿ ಒಂದರಂದು ಬೆಳಿಗ್ಗೆ ಅವರು ಮಲೇಷ್ಯಾಕ್ಕೆ ಹೋಗಬೇಕಿತ್ತು. ನಿಗದಿಯಂತೆ ರಜನಿಕಾಂತ್ ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ. ಆದ್ರೆ ಪಾಸ್ ಪೋರ್ಟ್ ಮನೆಯಲ್ಲಿಯೇ ಬಿಟ್ಟು ಹೋಗಿದ್ದರಂತೆ.

ತಮ್ಮ ಅಸಿಸ್ಟಂಟ್ ಗೆ ಪಾಸ್ ಪೋರ್ಟ್ ತರಲು ಹೇಳಿದ್ದಾರೆ. ಈ ಕಾರಣದಿಂದಾಗಿ ರಜನಿಕಾಂತ್ ವಿಮಾನ ನಿಲ್ದಾಣದಲ್ಲಿಯೇ ಕೆಲ ಸಮಯ ಕಳೆಯಬೇಕಾಯ್ತು. ಇದು ರಜನಿ ಅಭಿಮಾನಿಗಳಿಗೆ ಹಬ್ಬದಷ್ಟು ಖುಷಿ ನೀಡಿದ್ದು ಸುಳ್ಳಲ್ಲ. ರಜನಿ ಜೊತೆ ಫೋಟೋ ತೆಗೆಸಿಕೊಂಡ ಅಭಿಮಾನಿಗಳು ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿದ್ದಾರೆ.

ಈ ವೇಳೆ ರಜನಿಕಾಂತ್ ಮಾಧ್ಯಮಗಳ ಜೊತೆ ಕೂಡ ಮಾತನಾಡಿದರು. ರಜನಿಕಾಂತ್ ಅಭಿನಯದ ‘ಕಬಾಲಿ’ ಚಿತ್ರ ಮಾರ್ಚ್ ನಲ್ಲಿ ತೆರೆಗೆ ಬರಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...