alex Certify
ಕನ್ನಡ ದುನಿಯಾ       Mobile App
       

Kannada Duniya

ಸೂಪರ್ ಸ್ಟಾರ್ ರಜನಿ ಅಭಿಮಾನಿಗಳಿಗೊಂದು ಸಂತಸದ ಸುದ್ದಿ

rajni-basha_1369811754ಇಪ್ಪತ್ತು ವರ್ಷಗಳ ಹಿಂದೆ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದ್ದ ರಜನಿಕಾಂತ್ ಅಭಿನಯದ ‘ಭಾಷಾ’ ಚಿತ್ರದ ಭಾಗ 2 ಆರಂಭವಾಗಲಿದೆ ಎಂದು ತಿಳಿದುಬಂದಿದ್ದು, ಇದಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಹಸಿರು ನಿಶಾನೆ ತೋರಿದ್ದಾರೆಂದು ಹೇಳಲಾಗಿದೆ.

1995 ರಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ತಯಾರಾಗಿ ಬಿಡುಗಡೆಯಾದ ‘ಭಾಷಾ’ ಚಿತ್ರ 25 ಕೋಟಿ ರೂ.ಗಳನ್ನು ಗಳಿಸಿತ್ತಲ್ಲದೇ ಕನ್ನಡದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದಲ್ಲಿ ‘ಕೋಟ್ಯಾಧಿಪತಿ’ ಸೇರಿದಂತೆ ಹಲವಾರು ಭಾರತೀಯ ಭಾಷೆಗಳಿಗೆ ರಿಮೇಕ್ ಆಗಿ ಅಲ್ಲಿಯೂ ಈ ಚಿತ್ರ ಸೂಪರ್ ಹಿಟ್ ಆಗಿತ್ತು.

ಸ್ನೇಹಿತನ ಸಾವಿನಿಂದ ನೊಂದು ವ್ಯವಸ್ಥೆಯ ವಿರುದ್ದ ಸಿಡಿದೇಳುವ ಆಟೋ ಚಾಲಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರಜನಿಕಾಂತ್, ‘ಭಾಷಾ ಒಂದು ಬಾರಿ ಹೇಳಿದರೆ ನೂರು ಬಾರಿ ಹೇಳಿದಂತೆ’ ಎಂಬ ತಮ್ಮ ಡೈಲಾಗಿನಿಂದ ಮನೆ ಮಾತಾಗಿದ್ದರಲ್ಲದೇ ತಮಿಳು ಚಿತ್ರರಂಗದಲ್ಲಿ ಅವರ ಸೂಪರ್ ಸ್ಟಾರ್ ಪಟ್ಟವನ್ನು ಈ ಚಿತ್ರ ಮತ್ತಷ್ಟು ಗಟ್ಟಿಗೊಳಿಸಿತ್ತು.

ನಗ್ಮಾ ನಾಯಕಿ ನಟಿಯಾಗಿದ್ದ ಈ ಚಿತ್ರದ ಹಾಡುಗಳು ಇಂದಿಗೂ ಚಿತ್ರ ಪ್ರೇಮಿಗಳ ಬಾಯಲ್ಲಿ ಗುನುಗುತ್ತಿದ್ದು, ಸ್ಯಾಂಡಲ್ ವುಡ್ ನಟ ಶಶಿಕುಮಾರ್, ರಜನಿಕಾಂತ್ ಸಹೋದರನ ಪಾತ್ರ ಮಾಡಿದ್ದರು. ತಮ್ಮ ತಣ್ಣಗಿನ ದ್ವನಿಯಲ್ಲೇ ಕ್ರೂರತ್ವವನ್ನು ಹೊಮ್ಮಿಸುತ್ತಿದ್ದ ನಟ ರಘುವರನ್ ಖಳ ನಟನ ಪಾತ್ರಕ್ಕೆ ಜೀವ ತುಂಬಿದ್ದರು.

ಸುರೇಶ್ ಕೃಷ್ಣ ನಿರ್ದೇಶನದಲ್ಲಿ ಮೂಡಿ ಬಂದಿದ್ದ ‘ಭಾಷಾ’ ಚಿತ್ರದ ಭಾಗ 2 ನಿರ್ಮಿಸಲು ರಜನಿಕಾಂತ್ ಈಗಾಗಲೇ ಹಸಿರು ನಿಶಾನೆ ತೋರಿದ್ದಾರೆನ್ನಲಾಗಿದ್ದು, ಭಾಗ 2 ನ್ನೂ ಸುರೇಶ್ ಕೃಷ್ಣಾರವರೇ ನಿರ್ದೇಶಿಸಲಿದ್ದಾರೆಂಬ ಮಾತುಗಳು ಕೇಳಿ ಬಂದಿವೆ. ರಜನಿಕಾಂತ್ ‘ರೋಬೋ 2’ ಮುಗಿಸಿಕೊಟ್ಟ ನಂತರ ‘ಭಾಷಾ-2’ ಚಿತ್ರ ಪ್ರೇಮಿಗಳನ್ನು ಮನರಂಜಿಸಲು ಸಿದ್ದವಾಗಲಿದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...