alex Certify
ಕನ್ನಡ ದುನಿಯಾ       Mobile App
       

Kannada Duniya

ಸೂಪರ್ ಡಾನ್ಸರ್-2 ಟ್ರೋಫಿ ಗೆದ್ದ ಅಸ್ಸಾಂನ ಬಿಶಾಲ್

ಸೋನಿ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಮಕ್ಕಳ ಡಾನ್ಸಿಂಗ್ ರಿಯಾಲಿಟಿ ಶೋ ‘ಸೂಪರ್ ಡಾನ್ಸರ್-2’ನಲ್ಲಿ 12 ವರ್ಷದ ಬಿಶಾಲ್ ಶರ್ಮಾ ಗೆಲುವು ಸಾಧಿಸಿದ್ದಾನೆ. ರಿತ್ವಿಕ್ ದಿವಾಕರ್, ವೈಷ್ಣವಿ ಪ್ರಜಾಪತಿ ಹಾಗೂ ಆಕಾಶ್ ಥಾಪಾನನ್ನು ಹಿಂದಿಕ್ಕಿದ ಬಿಶಾಲ್, ಟ್ರೋಫಿ ತನ್ನದಾಗಿಸಿಕೊಂಡಿದ್ದಾನೆ.

ಬಿಶಾಲ್ ಶರ್ಮಾ ಅಸ್ಸಾಂ ಮೂಲದವನು. ತನ್ನ ಅದ್ಭುತ ಡಾನ್ಸ್ ಮೂಲಕ ನಿರ್ಣಾಯಕರು ಹಾಗೂ ವೀಕ್ಷಕರ ಮನಗೆದ್ದಿದ್ದ. ಶಿಲ್ಪಾ ಶೆಟ್ಟಿ, ಅನುರಾಗ್ ಬಸು ಹಾಗೂ ಗೀತಾ ಕಪೂರ್ ಈ ರಿಯಾಲಿಟಿ ಶೋನ ತೀರ್ಪುಗಾರರಾಗಿದ್ದರು.

ವೀಕ್ಷಕರಿಂದ ಬಂದಿದ್ದ ಒಟ್ಟು 3,40,00,000 ಮತಗಳಲ್ಲಿ ಬಿಶಾಲ್ ಶರ್ಮಾಗೆ 1,20,00,000 ಮತಗಳು ಬಂದಿದ್ದವು. ಟ್ರೋಫಿಯ ಜೊತೆಗೆ ಈ ಪುಟಾಣಿ 15 ಲಕ್ಷ ರೂಪಾಯಿ ನಗದು ಬಹುಮಾನವನ್ನು ಗೆದ್ದುಕೊಂಡಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...