alex Certify
ಕನ್ನಡ ದುನಿಯಾ       Mobile App
       

Kannada Duniya

‘ಗ್ರೇಟ್ ಖಲಿ’ಯಿಂದ ನನಸಾಯ್ತು ಸನ್ನಿ ಲಿಯೋನ್ ಕನಸು

sunny

ಪಡ್ಡೆ ಹೈಕಳ ಎದೆಗೆ ಕಿಚ್ಚು ಹಚ್ಚುವ ಬಾಲಿವುಡ್ ಹಾಟ್ ಬೆಡಗಿ ಸನ್ನಿ ಲಿಯೋನ್ ಜೀವನ ಚರಿತ್ರೆ ಸಿನಿಮಾ ಆಗಿ ಮೂಡಿ ಬರುತ್ತಿದೆ. ಸನ್ನಿ ಲಿಯೋನ್ ಜೀವನದ ಕತೆ ಆಧಾರಿತ ಚಿತ್ರದಲ್ಲಿ ಆಕೆಯೇ ನಟಿಸುವ ಮೂಲಕ ಹೊಸ ಹೆಜ್ಜೆ ಇಡಲಿದ್ದಾಳೆ.

ಹೀಗಿರುವಾಗಲೇ ಸನ್ನಿ ಲಿಯೋನ್ ಕುರಿತಾದ ಮತ್ತೊಂದು ಸುದ್ದಿ ಬಂದಿದೆ. ಅದೇನೆಂದರೆ, ಸನ್ನಿ ಲಿಯೋನ್ ಬಹುವರ್ಷಗಳ ಆಸೆಯೊಂದು ಈಡೇರಿದೆ. ಹೌದು, ಹಲವು ವರ್ಷಗಳಿಂದ ಆಕೆ ಹೊಂದಿದ್ದ ಕನಸು ನನಸಾಗಿದೆ. ಅಂದಹಾಗೇ ಸನ್ನಿಗೆ ಅಭಿಮಾನಿಗಳ ಸಂಖ್ಯೆ ಅಪಾರ. ಆಕೆಯೊಂದಿಗೆ ಒಂದೇ ಒಂದು ಫೋಟೋ ತೆಗೆಸಿಕೊಳ್ಳಬೇಕೆಂದು ಅನೇಕರು ಹಂಬಲಿಸುತ್ತಾರೆ. ಆದರೆ, ಸನ್ನಿಗೆ ಡಬ್ಲ್ಯೂ.ಡಬ್ಲ್ಯೂ.ಇ. ಖ್ಯಾತ ಆಟಗಾರ, ಹೆವಿವೇಯ್ಟ್ ಚಾಂಪಿಯನ್ ಗ್ರೇಟ್ ಖಲಿ ಜೊತೆಗೆ ಫೋಟೋ ತೆಗೆಸಿಕೊಳ್ಳುವ ಕನಸಿತ್ತು.

ವಿಮಾನವೊಂದರಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಸನ್ನಿ ಲಿಯೋನ್ ಗೆ ಗ್ರೇಟ್ ಖಲಿ ಕೂಡ ಇರುವುದು ಕಂಡಿದೆ. ಕೂಡಲೇ ಅವರ ಬಳಿ ಹೋದ ಸನ್ನಿ ಫೋಟೋ ತೆಗೆಸಿಕೊಂಡು ತನ್ನ ಕನಸನ್ನು ನನಸು ಮಾಡಿಕೊಂಡಿದ್ದಾಳೆ. ಇದನ್ನು ಸಾಮಾಜಿಕ ಜಾಲತಾಣ ಇನ್ ಸ್ಟಾ ಗ್ರಾಂನಲ್ಲಿ ಸನ್ನಿ ಶೇರ್ ಮಾಡಿದ್ದು, ಸುಮಾರು 2 ಲಕ್ಷ ಮಂದಿ ಲೈಕ್ ಮಾಡಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...