alex Certify
ಕನ್ನಡ ದುನಿಯಾ       Mobile App
       

Kannada Duniya

ಸನ್ನಿ ಲಿಯೋನ್ ಈಗ ಮೇಣದ ಗೊಂಬೆ

ಪಡ್ಡೆ ಹುಡುಗರ ಆರಾಧ್ಯ ದೇವತೆ ಸನ್ನಿ ಲಿಯೋನ್ ಪಕ್ಕ ನಿಂತು ಫೋಟೋ ತೆಗೆಸಿಕೊಳ್ಳಬೇಕೆಂದು ಯಾರಿಗೆ ಇಷ್ಟ ಇಲ್ಲ ಹೇಳಿ. ಈಕೆಯ ಅಭಿಮಾನಿಗಳ ಅಬ್ಬರಕ್ಕೆ ಕೇರಳದಲ್ಲಿ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಆಗಿದ್ದು ಗೊತ್ತೇ ಇದೆ.

ಈಗ ಸನ್ನಿ ಲಿಯೋನ್ ಪಕ್ಕದಲ್ಲಿ ನಿಂತು ಯಾರು ಬೇಕಾದರೂ ಫೋಟೋ ತೆಗೆಸಿಕೊಳ್ಳಬಹುದು. ಹೇಗೆ ಎಂದು ಕೇಳುತ್ತೀರಾ? ದೆಹಲಿಯ ಟುಸಾಡ್ಸ್ ಮ್ಯೂಸಿಯಂನಲ್ಲಿ ಈಗ ಮೇಣದ ಮೂರ್ತಿಯನ್ನು ನಿರ್ಮಿಸಲಾಗಿದೆ. ಜೀವಂತ ಸನ್ನಿ ಲಿಯೋನ್ ಪಕ್ಕದಲ್ಲಿ ನಿಂತ ಫೀಲಾಗುವ ಹಾಗಿದೆ ಮೂರ್ತಿ. ಇದನ್ನು ಬೇರೆ ಯಾರೋ ಹೇಳಿದ್ದಲ್ಲ. ಬುಧವಾರವಷ್ಟೇ ಇದನ್ನು ಲೋಕಾರ್ಪಣೆಗೊಳಿಸಿದ ಸನ್ನಿ ಲಿಯೋನ್ ಅವರೇ ಉಸುರಿದ್ದು.

ಇವತ್ತು ನನ್ನದೇ ಮೂರ್ತಿಯನ್ನು ದೆಹಲಿಯಲ್ಲಿ ಅನಾವರಣಗೊಳಿಸಬೇಕಾದರೆ ಬಹಳ ಎಕ್ಸೈಟ್ ಆಗಿದ್ದೆ. ನನಗೆ ನನ್ನ ಕಣ್ಣುಗಳನ್ನೇ ನಂಬಲಾಗಲಿಲ್ಲ ಎಂದು ತಿಳಿಸಿದ್ದಾರೆ. ಲಂಡನ್ ನ ಮೇಡಮ್ ಟುಸಾಡ್ಸ್ ಮ್ಯೂಸಿಯಂನ ಬ್ರಾಂಚ್ ದೆಹಲಿ ಸೇರಿದಂತೆ ಜಗತ್ತಿನ ವಿವಿಧೆಡೆಗಳಲ್ಲಿದೆ. ದೆಹಲಿಯಲ್ಲಿ ಈಗಾಗಲೇ ಅಮಿತಾಬ್ ಬಚ್ಚನ್, ವಿರಾಟ್ ಕೊಹ್ಲಿ, ಶಾರುಕ್ ಖಾನ್, ಅನಿಲ್ ಕಪೂರ್ ಸೇರಿದಂತೆ ಅನೇಕ ಸಾಧಕರ ಮೇಣದ ಮೂರ್ತಿಗಳಿವೆ. ಈಗ ಈ ಸಾಲಿನಲ್ಲಿ ಸನ್ನಿ ಲಿಯೋನ್ ಸಹ ಕಾಣಸಿಗುತ್ತಾರೆ. ಹೀಗಾಗಿ ಜೊತೆಗೆ ನಿಂತು ಫೋಟೋ ತೆಗೆದುಕೊಳ್ಳಲೀಗ ಮುಕ್ತ ಅವಕಾಶ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...