alex Certify
ಕನ್ನಡ ದುನಿಯಾ       Mobile App
       

Kannada Duniya

ಇಡೀ ದಿನ ಬಿಕನಿಯಲ್ಲಿ ಸಂಚರಿಸುವವಳು ನಾನಲ್ಲ– ಸನ್ನಿ ಲಿಯೋನ್

sunny-bikini

ಬಾಲಿವುಡ್ ನಲ್ಲಿ ತನ್ನ ಇಮೇಜ್ ಬದಲಾಯಿಸಿಕೊಳ್ಳಲು ಮುಂದಾಗಿದ್ದಾಳೆ ಸನ್ನಿ ಲಿಯೋನ್. ತನ್ನ ಮನಸ್ಸು ಹೇಳಿದಂತೆ ಕೇಳಿ ಕೆಲಸ ಮಾಡಲು ಮುಂದಾಗಿದ್ದಾಳೆ. ಜೊತೆಗೆ ಬಾಲಿವುಡ್ ನಲ್ಲಿ ಈವರೆಗೆ ಮಾಡದ ಕೆಲಸವನ್ನು ಮಾಡಲು ಮುಂದಾಗಿದ್ದಾಳೆ. ಹಾಗೆ ಉದ್ಯಮದ ಜನ ತನ್ನ ಪರಿಶ್ರಮವನ್ನು ನೋಡಲಿ ಎಂದು ಬಯಸಿದ್ದಾಳೆ ಸನ್ನಿ ಲಿಯೋನ್.

ವರದಿಯೊಂದರ ಪ್ರಕಾರ ಸನ್ನಿ ತನ್ನ ಚಿತ್ರದ ಬಗ್ಗೆ ಮಾತನಾಡಿದ್ದಾಳೆ. ನನ್ನ ‘ಮಸ್ತಿಜಾದೆ’ ಚಿತ್ರದ ನಂತರ ನನಗೆ ಅಂತಹ ಚಿತ್ರಗಳ ಆಫರ್ ಬರೋದು ಸಹಜ. ಈಗಾಗಲೇ ನಾನು ಎರಡು ಚಿತ್ರಗಳನ್ನು ಮಾಡ್ತಿದ್ದೇನೆ. ಅವು ‘ಮಸ್ತಿಜಾದೆ’ ಕಾಮಿಡಿ ಚಿತ್ರಕ್ಕಿಂತ ಭಿನ್ನವಾಗಿದೆ. ನಾನು ಬೇರೆ ಬಗೆಯ ಚಿತ್ರಗಳನ್ನೂ ಮಾಡಬಲ್ಲೆ. ಈ ಹಿಂದೆ ನಾನು ಒಂದು ಭಯಾನಕ ಚಿತ್ರ ಹಾಗೂ ಇನ್ನೊಂದು ಚಿತ್ರದಲ್ಲಿ ಅರ್ಧ ಆಧುನಿಕ ಹಾಗೂ ಅರ್ಧ ಮಧ್ಯಮ ವರ್ಗದ ಪಾತ್ರದಲ್ಲಿ ನಟಿಸಿದ್ದೇನೆ ಎಂದಿದ್ದಾಳೆ ಸನ್ನಿ.

ಪಾತ್ರಗಳನ್ನು ನೋಡಿ ಚಿತ್ರ ಒಪ್ಪಿಕೊಳ್ಳುತ್ತಾಳಂತೆ ಸನ್ನಿ ಲಿಯೋನ್, ‘ಮಸ್ತಿಜಾದೆ’ಯಲ್ಲಿ ಡಬಲ್ ಪಾತ್ರವಿದೆ ಎಂದು ಒಪ್ಪಿಕೊಂಡಿದ್ದಳಂತೆ. ನಾನು ಪ್ರತಿದಿನ ಬಿಕನಿ ಅಥವಾ ಸ್ಟಿಲಿಟೊಸ್ ಧರಿಸಿ ಇರುವವಳಲ್ಲ. ನಟಿಯಾಗಿದ್ದಕ್ಕೆ ನಾನು ಅದೃಷ್ಟವಂತೆ ಎಂದುಕೊಳ್ಳತ್ತೇನೆ ಎನ್ನುತ್ತಾಳೆ 34 ವರ್ಷದ ಸನ್ನಿ. ವೃತ್ತಿ ಹಾಗೂ ವೈಯಕ್ತಿಕ ಜೀವನವನ್ನೂ ಒಂದೇ ರೀತಿ ನೋಡುವುದು ನನಗೆ ಇಷ್ಟವಾಗುವುದಿಲ್ಲ ಎಂದಿದ್ದಾಳೆ ಸನ್ನಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...