alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಯ್ತು ಸನ್ನಿಯ ಸೇಡಿನ ವಿಡಿಯೋ

ನಟಿ ಸನ್ನಿ ಲಿಯೋನ್ ನಕಲಿ ಹಾವಿಗೆ ಭಯಗೊಂಡಿದ್ದ ಫನ್ನಿ ವಿಡಿಯೋ ವೈರಲ್ ಆಗಿದ್ದು ನಿಮಗೆ ಗೊತ್ತೇ ಇದೆ. ತನ್ನ ಮೇಲೆ ರಬ್ಬರ್ ಹಾವು ಎಸೆದ ಯುವಕನ ವಿರುದ್ಧ ಸನ್ನಿ ಸೇಡು ತೀರಿಸಿಕೊಂಡಿದ್ದಾರೆ.

ಚಿತ್ರೀಕರಣದ ಸಂದರ್ಭದಲ್ಲಿ ಬಿಡುವಿನ ವೇಳೆಯಲ್ಲಿ ಪುಸ್ತಕ ಓದುತ್ತಾ ಕುಳಿತಿದ್ದ ಸನ್ನಿ ಲಿಯೋನ್ ಮೇಲೆ ಚಿತ್ರ ತಂಡದ ಸದಸ್ಯನೊಬ್ಬ ರಬ್ಬರ್ ಹಾವು ಎಸೆದಿದ್ದು, ಇದರಿಂದ ಆತಂಕಗೊಂಡ ಸನ್ನಿ, ಹಾವು ಎಸೆದ ವ್ಯಕ್ತಿಯನ್ನು ಓಡಿಸಿಕೊಂಡು ಹೋಗಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಆತನ ವಿರುದ್ಧ ಸೇಡು ತೀರಿಸಿಕೊಂಡಿರುವ ಸನ್ನಿಯ ಹೊಸ ವಿಡಿಯೋ ಕೂಡ ವೈರಲ್ ಆಗಿದೆ. ಎರಡೂ ಕೈಯಲ್ಲಿ ಚಾಕೋಲೇಟ್ ಕೇಕ್ ಗಳನ್ನು ಹಿಡಿದುಕೊಂಡ ಸನ್ನಿ, ಗೆಳೆಯರೊಂದಿಗೆ ಮಾತನಾಡುತ್ತಾ ಕುಳಿತಿದ್ದ ಯುವಕನ ಮುಖ, ತಲೆಯ ಭಾಗಕ್ಕೆ ಕೇಕ್ ಹಚ್ಚಿ ಪರಾರಿಯಾಗಿದ್ದಾರೆ.

ಇದು ಸಿಹಿಯಾದ ಸೇಡು ಎಂದು ಸನ್ನಿ ಲಿಯೋನ್ ಹೇಳಿಕೊಂಡಿದ್ದು, ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...