alex Certify
ಕನ್ನಡ ದುನಿಯಾ       Mobile App
       

Kannada Duniya

ಅಮೀರ್ ಹೇಳಿಕೆಗೆ ಸನ್ನಿ ಲಿಯೋನ್ ಪ್ರತಿಕ್ರಿಯೆ ಏನು ಗೊತ್ತಾ..?

sunny-leone-and-aamir-khan (1)

ಸಂದರ್ಶನವೊಂದರಲ್ಲಿ ಸನ್ನಿ ಲಿಯೋನ್ ಅವರಿಗೆ ಹಿಂದಿನ ಜೀವನದ ಕುರಿತಂತೆ ಎದುರಾದ ಪ್ರಶ್ನೆಗೆ ಆಕೆ ನಯವಾಗಿಯೇ ಉತ್ತರಿಸಿದ್ದು, ಬಾಲಿವುಡ್ ಮಂದಿಯ ಮೆಚ್ಚುಗೆಗೆ ಕಾರಣವಾಗಿತ್ತು. ಹಿಂದೆ ಫೋರ್ನ್ ಸ್ಟಾರ್ ಆಗಿದ್ದ ಬಗ್ಗೆ ಪ್ರಸ್ತಾಪಿಸಿದ್ದ ಪತ್ರಕರ್ತ ನಿಮ್ಮೊಂದಿಗೆ ಅಮೀರ್ ಖಾನ್ ನಟಿಸುತ್ತಾರೆಯೇ ಎಂದು ಪ್ರಶ್ನಿಸಿದ್ದರು.

ಇದಕ್ಕೆ ಸನ್ನಿ ಪ್ರತಿಕ್ರಿಯೆ ನೀಡಿ, ಅವರು ನನ್ನೊಂದಿಗೆ ನಟಿಸದಿದ್ದರೂ, ನಾನು ಅವರ ಅಭಿಮಾನಿ ಎಂದು ಹೇಳಿಕೊಂಡಿದ್ದರು. ಈ ಸಂದರ್ಶನದ ಬಗ್ಗೆ ತಿಳಿದುಕೊಂಡ ಅಮೀರ್ ಖಾನ್, ಸನ್ನಿಲಿಯೋನ್ ಹಿಂದಿನ ಜೀವನದ ಬಗ್ಗೆ ನನಗೆ ಬೇಕಿಲ್ಲ. ಮುಂದೆ ಅವರೊಂದಿಗೆ ನಟಿಸುವುದಾಗಿ ಹೇಳಿಕೊಂಡಿದ್ದರು. ಇದರ ಬಗ್ಗೆ ಬಾಲಿವುಡ್ ಸಿನಿವಲಯದಲ್ಲಿ ವ್ಯಾಪಕ ಚರ್ಚೆಯಾಗಿತ್ತು. ಇದೀಗ ಸನ್ನಿ ಲಿಯೋನ್ ಅಮೀರ್ ಖಾನ್ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಸೂಪರ್ ಸ್ಟಾರ್ ಅಮೀರ್ ಖಾನ್ ಅವರೊಂದಿಗೆ ನಾನು ನಟಿಸಲು ಸಾಧ್ಯವಾಗುತ್ತದೆಯೋ ಇಲ್ಲವೋ ಎಂಬುದು ಗೊತ್ತಿಲ್ಲ. ಆದರೆ, ನಾನಂತೂ ಅವರ ಅಭಿಮಾನಿಯಾಗಿಯೇ ಉಳಿಯುತ್ತೇನೆ ಎಂದು ಹೇಳಿದ್ದಾರೆ.

ಅಮೀರ್ ಖಾನ್ ನನ್ನೊಂದಿಗೆ ನಟಿಸುವುದಾಗಿ ಹೇಳಿದ್ದರಿಂದ ನನಗೆ ಆಶ್ಚರ್ಯವಾಗಿದೆ. ಮುಂದಿನ ದಿನಗಳಲ್ಲಿ ಅವರೊಂದಿಗೆ ನಟಿಸುವ ಅವಕಾಶ ದೊರೆತರೂ, ದೊರೆಯದಿದ್ದರೂ ನಾನು ಅವರ ಅಭಿಮಾನಿಯಾಗಿಯೇ ಇರುತ್ತೇನೆ ಎಂದು ಹೇಳಿರುವುದಾಗಿ ತಿಳಿದುಬಂದಿದೆ. ಸನ್ನಿ ಸಂದರ್ಶನದಲ್ಲಿ ನೀಡಿದ ಹೇಳಿಕೆಗಳಿಗೆ ಬಾಲಿವುಡ್ ನಟಿಯರೂ ಮೆಚ್ಚುಗೆ ವ್ಯಕ್ತಪಡಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...