alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಿವುಡ್ ಸ್ಟಾರ್ ಗೆ ಸನ್ನಿ ಲಿಯೋನ್ ಕಪಾಳಮೋಕ್ಷ

541

ಬಾಲಿವುಡ್ ಬೇಬಿ ಡಾಲ್ ಮತ್ತೆ ಸುದ್ದಿಯಲ್ಲಿದ್ದಾಳೆ. ಬಾಲಿವುಡ್ ನಟ ರಜನೀಶ್ ದುಗ್ಗಲ್ ಗೆ ಮುಂಬೈ ಪಬ್ ನಲ್ಲಿ ಕಪಾಳಮೋಕ್ಷ ಮಾಡಿದ್ದಾಳೆ. ಒಂದಲ್ಲ ಎರಡಲ್ಲ ಆರು ಬಾರಿ ಹೊಡೆದಿದ್ದಾಳೆ.

ಅಂತಹದ್ದೇನಾಯ್ತು ಅಂತಾ ತಲೆಕೆಡಿಸಿಕೊಳ್ಳಬೇಡಿ. ಸನ್ನಿ ಕಪಾಳಮೋಕ್ಷ ಮಾಡಿದ್ದು ರಿಯಲ್ ಆಗಿ ಅಲ್ಲ, ರೀಲ್ ನಲ್ಲಿ. ‘ಬೈಮಾನ್ ಲವ್’ ಚಿತ್ರದ ಶೂಟಿಂಗ್ ವೇಳೆ. ಒಂದು ದೃಶ್ಯದಲ್ಲಿ ಸನ್ನಿ ರಜನೀಶ್ ದುಗ್ಗಲ್ ಗೆ ಕಪಾಳಮೋಕ್ಷ ಮಾಡಬೇಕು. ಆರಂಭದಲ್ಲಿ ಸನ್ನಿ ಕಂಪರ್ಟೇಬಲ್ ಆಗಿರಲಿಲ್ಲವಂತೆ.

ನಿರ್ದೇಶಕರು ರೀ ಟೇಕ್ ತೆಗೆದುಕೊಳ್ಳಬಹುದು ಎಂದಾಗ ಸನ್ನಿ ರಿಲ್ಯಾಕ್ಸ್ ಆದಳಂತೆ. ವರದಿ ಪ್ರಕಾರ ಸನ್ನಿ ಕೊನೆ ಹೊಡೆತ ಸಿಕ್ಕಾಪಟ್ಟೆ ಜೋರಾಗಿತ್ತಂತೆ. ರಜನೀಶ್ ಕೆನ್ನೆಗೆ ಗಾಯವಾಗಿದೆಯಂತೆ. ರಾಜೀವ್ ಚೌಧರಿ ನಿರ್ದೇಶನದ ‘ಬೈಮಾನ್ ಲವ್’ ಇದೇ ವರ್ಷ ತೆರೆಗೆ ಬರಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...