alex Certify ಸನ್ನಿ ಲಿಯೋನ್ ಕುರಿತು ಇಲ್ಲಿದೆ ಕುತೂಹಲಕಾರಿ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸನ್ನಿ ಲಿಯೋನ್ ಕುರಿತು ಇಲ್ಲಿದೆ ಕುತೂಹಲಕಾರಿ ಮಾಹಿತಿ

ಬಾಲಿವುಡ್ ನಟಿ ಸನ್ನಿ ಲಿಯೋನ್, ತೆರೆದಿಟ್ಟ ಪುಸ್ತಕ. ಆಕೆಯ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ಗೊತ್ತು. ತನ್ನ ಬೆಡ್ ರೂಂ ವಿಷಯವನ್ನೂ ಸನ್ನಿ ಅಭಿಮಾನಿಗಳ ಮುಂದೆ ಬಿಂದಾಸ್ ಆಗಿ ಹೇಳ್ತಾಳೆ. ಆದ್ರೆ ನೀವು ಕೇಳಿರದ ಕೆಲವು ವಿಷಯಗಳನ್ನು ನಾವಿಲ್ಲಿ ಹೇಳ್ತೀವಿ.

ಹಾಟ್ ಹಾಟ್ ಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಸನ್ನಿ ಲಿಯೋನ್ ಗೆ ಅಡುಗೆ ಮಾಡೋದೆಂದ್ರೆ ಬಹಳ ಖುಷಿಯಂತೆ. ಸನ್ನಿ, ಬಗೆಬಗೆಯ ತಿಂಡಿ ಮಾಡೋಕೆ ಇಷ್ಟಪಡ್ತಾಳೆ. ಫಾಸ್ಟ್ ಫುಡ್ ಹಾಗೂ ಕಿವಿ ಹಣ್ಣು ಅಂದ್ರೆ ಬೆಡಗಿಗೆ ಸಿಕ್ಕಾಪಟ್ಟೆ ಇಷ್ಟ. ಪರೋಟಾ ಹಾಗೂ ಇಟಾಲಿಯನ್ ತಿಂಡಿಗಳನ್ನು ಬಾಯಿ ಚಪ್ಪರಿಸಿ ತಿನ್ನುತ್ತಾಳೆ ಸನ್ನಿ. ಅವಳು ಮೊದಲು ಕೆಲಸ ಮಾಡಿದ್ದು ಕೂಡ ಬೇಕರಿಯಲ್ಲಿ.

ಸನ್ನಿ ಲಿಯೋನ್ ದೇವರನ್ನು ನಂಬ್ತಾಳೆ. ಪ್ರತಿದಿನ ದೇವರನ್ನು ನೆನೆಯುತ್ತಾಳಂತೆ. ಆಕೆ ಚಿಕ್ಕವಳಿರುವಾಗ ಸಹೋದರನ ಜೊತೆ ಗುರುದ್ವಾರಕ್ಕೆ ಹೋಗುತ್ತಿದ್ದಳಂತೆ. ಅಲ್ಲಿ ಮದುವೆಯಾಗುವವರನ್ನು ನೋಡ್ತಾ ಇದ್ದಳಂತೆ. ಹಾಗೆ ಆಕೆ ಕೂಡ ಗುರುದ್ವಾರದಲ್ಲಿಯೇ ಮದುವೆಯಾಗಿದ್ದಾಳೆ. ಇಷ್ಟೇ ಅಲ್ಲ ಆಗಾಗ ಮುಂಬೈನ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬರ್ತಾಳೆ ಸನ್ನಿ.

ಸನ್ನಿಗೆ ಹೊಲಿಗೆ ಎಂದ್ರೆ ಇಷ್ಟ. ತಮ್ಮ ಬಿಡುವಿನ ಸಮಯದಲ್ಲಿ ಹೊಲಿಗೆ ಮಾಡಲು ಸನ್ನಿ ಇಷ್ಟ ಪಡ್ತಾಳೆ. ಸಮಾಜ ಸೇವೆಯಲ್ಲಿ ಕೂಡ ತನ್ನನ್ನು ತಾನು ತೊಡಗಿಸಿಕೊಂಡಿದ್ದಾಳೆ ಸನ್ನಿ.

ಅಮೀರ್ ಖಾನ್ ಸನ್ನಿಯ ಫೇವರೆಟ್ ಆ್ಯಕ್ಟರ್. ಬಿಡುವಿನ ಸಮಯದಲ್ಲಿ ಸನ್ನಿ, ಅಮೀರ್ ಖಾನ್ ಚಿತ್ರಗಳನ್ನು ನೋಡ್ತಾಳೆ. ಅಮೀರ್ ನಟಿಸಿದ ಜಾಹೀರಾತೊಂದನ್ನು ನೋಡಿ ಸನ್ನಿ, ಅಮೀರ್ ಗೆ ಟ್ವೀಟ್ ಕೂಡ ಮಾಡಿದ್ದಳು. ಅಮೀರ್ ಜೊತೆ ನಟಿಸುವ ಆಸೆ ಸನ್ನಿಗಿದೆ.

ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಡಾನ್ಸ್ ಅಂದ್ರೆ ಸನ್ನಿಗೆ ಇಷ್ಟ. ಮಾಧುರಿ ಡ್ಯಾನ್ಸ್ ನಕಲು ಮಾಡಲು ಪ್ರಯತ್ನಿಸ್ತೇನೆ ಅಂತಾ ಒಂದು ಶೋದಲ್ಲಿ ಹೇಳಿದ್ದಾಳೆ.

ಕೆಲಸದಲ್ಲಿ ಸದಾ ಬ್ಯುಸಿ ಇರುವ ಸನ್ನಿ ಲಿಯೋನ್ ಗೆ ಹಿಂದುಸ್ತಾನಿ ಮಹಿಳೆಯರಂತಿರಲು ಇಷ್ಟ. ಸಮಯ ಸಿಕ್ಕಾಗೆಲ್ಲ ತನ್ನ ಗಂಡ ಡೇನಿಯಲ್ ಜೊತೆ ಇರಲು ಇಷ್ಟಪಡ್ತಾಳೆ. ಗಂಡನನ್ನು ಸನ್ನಿ ತುಂಬಾ ಪ್ರೀತಿಸ್ತಾಳೆ ಕೂಡ.

ಸೌಂದರ್ಯ ಕಾಪಾಡಿಕೊಳ್ಳಲು ಸನ್ನಿ ಏನು ಬೇಕಾದ್ರೂ ಮಾಡಬಲ್ಲಳು. ಕಠಿಣ ವ್ಯಾಯಾಮ ಹಾಗೂ ಯೋಗ ಮಾಡ್ತಾಳೆ ಸನ್ನಿ.

ಪಾರ್ಟಿ ಹಾಗೂ ಸಮಯ ಸಿಕ್ಕಾಗ ಟ್ರಿಪ್ ಹೋಗುವುದು ಸನ್ನಿಗೆ ಬಹಳ ಖುಷಿ ಕೊಡುತ್ತದೆಯಂತೆ. ಸನ್ನಿ, ಬಾಲಿವುಡ್ ಪಾರ್ಟಿಗಳಿಗೆ ಪತಿ ಜೊತೆ ಬಂದು ಸಖತ್ ಎಂಜಾಯ್ ಮಾಡ್ತಾಳಂತೆ. ಸಮಯ ಸಿಕ್ಕಾಗ ಸ್ನೇಹಿತರ ಜೊತೆ ಸುತ್ತುತ್ತಾಳಂತೆ.

ಪ್ರಾಣಿಗಳೆಂದ್ರೆ ಸನ್ನಿಗೆ ಇಷ್ಟ. ಪ್ರಾಣಿ ರಕ್ಷಣಾ ಸಂಸ್ಥೆಗಳಿಗೆ ಹಣ ಸಂಗ್ರಹಿಸಲು ಸನ್ನಿ ನೆರವಾಗ್ತಾಳೆ. ಪ್ರಾಣಿಗಳನ್ನು ಹೇಗೆ ಸಾಕಬೇಕೆಂಬ ಸಲಹೆಯನ್ನು ಕೂಡ ನೀಡ್ತಾಳೆ. ಎರಡು ನಾಯಿಗಳನ್ನು ಸನ್ನಿ ಸಾಕ್ತಾ ಇದ್ದು, ಬಿಡುವಿನ ಸಮಯದಲ್ಲಿ ಅವುಗಳ ಜೊತೆ ಆಟವಾಡ್ತಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...