alex Certify
ಕನ್ನಡ ದುನಿಯಾ       Mobile App
       

Kannada Duniya

ಅಬ್ಬಾ! ಸನ್ನಿ ಕೇಳಿರೋ ಸಂಭಾವನೆಯೆಷ್ಟು ಗೊತ್ತಾ…?

ಜನಪ್ರಿಯತೆಯನ್ನು ನಟಿ ಸನ್ನಿ ಲಿಯೋನ್ ಸರಿಯಾಗೇ ಬಳಸಿಕೊಳ್ತಿದ್ದಾಳೆ. ಯಾಕಂದ್ರೆ ಈ ಮಾಜಿ ನೀಲಿ ತಾರೆ ಬಾಹುಬಲಿ ಖ್ಯಾತಿಯ ಅನುಷ್ಕಾ ಶೆಟ್ಟಿಗಿಂತ್ಲೂ ಹೆಚ್ಚು ಸಂಭಾವನೆ ಕೇಳ್ತಿದ್ದಾಳೆ. ಸನ್ನಿಯ ಡಿಮಾಂಡ್ ಕೇಳಿ ದಕ್ಷಿಣ ಭಾರತದ ನಿರ್ಮಾಪಕರೆಲ್ಲ ದಂಗಾಗಿ ಹೋಗಿದ್ದಾರಂತೆ.

ಬಾಹುಬಲಿ ಚಿತ್ರಗಳಿಗೆ ಅನುಷ್ಕಾ ಶೆಟ್ಟಿ ಪಡೆದ ಸಂಭಾವನೆಗಿಂತ್ಲೂ ಹೆಚ್ಚಿನ ಹಣಕ್ಕಾಗಿ ಸನ್ನಿ ಲಿಯೋನ್ ಬೇಡಿಕೆ ಇಟ್ಟಿದ್ದಾಳೆ ಎನ್ನಲಾಗ್ತಿದೆ. ಒಂದು ಸಿನೆಮಾಕ್ಕೆ ಸನ್ನಿ ಲಿಯೋನ್ 2.5 ಕೋಟಿ ರೂಪಾಯಿ ಸಂಬಳವನ್ನೇ ಕೇಳಿದ್ದಾಳಂತೆ. ತೆರಿಗೆಯೆಲ್ಲಾ ಸೇರಿ ಅಂದಾಜು 3.5 ಕೋಟಿ ರೂ. ಕೊಡಬೇಕು ಎಂದಿದ್ದಾಳಂತೆ.

ಅನುಷ್ಕಾ ಶೆಟ್ಟಿ ಬಾಹುಬಲಿ ಸಿನೆಮಾಕ್ಕೆ ತಲಾ 2.5 ಕೋಟಿ ರೂಪಾಯಿ ಪಡೆದಿದ್ರು. ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಸೇರಿದಂತೆ ನಾಲ್ಕು ಭಾಷೆಗಳಲ್ಲೂ ಚಿತ್ರ ನಿರ್ಮಾಣವಾಗಲಿದ್ದು, ಸನ್ನಿ ಲಿಯೋನ್ ಕೂಡ ಬಹುಬೇಡಿಕೆಯ ನಟಿಯಾಗಿರೋದ್ರಿಂದ ಚಿತ್ರ ಯಶಸ್ವಿಯಾಗಬಹುದು ಅನ್ನೋದು ನಿರ್ಮಾಪಕರ ಲೆಕ್ಕಾಚಾರ.

ಹಾಗಾಗಿ ಸನ್ನಿ ಡಿಮಾಂಡ್ ಗೆ ಒಪ್ಪಿಕೊಂಡಿದ್ದಾರಂತೆ. ಈ ಚಿತ್ರಕ್ಕಾಗಿ ಸನ್ನಿ ಲಿಯೋನ್ ಕತ್ತಿ ವರಸೆ ಹಾಗೂ ಕುದುರೆ ಸವಾರಿಯನ್ನು ಕೂಡ ಕಲಿಯುತ್ತಿದ್ದಾರೆ. ರಾಜಕುಮಾರಿಯ ನಿಜಜೀವನವನ್ನು ತೆರೆ ಮೇಲೆ ತರಲು ನಿರ್ದೇಶಕರು ಸಜ್ಜಾಗಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...