alex Certify
ಕನ್ನಡ ದುನಿಯಾ       Mobile App
       

Kannada Duniya

ಹೆಣ್ಣು ಮಗುವಿಗೆ ತಾಯಿಯಾಗಿದ್ದಾಳೆ ಸನ್ನಿ ಲಿಯೋನ್

sunny-leone-1

ಬಾಲಿವುಡ್ ನ ಹಾಟ್ ನಟಿ ಸನ್ನಿ ಲಿಯೋನ್ ಹೆಣ್ಣು ಮಗುವಿಗೆ ತಾಯಿಯಾಗಿದ್ದಾಳೆ. ಅರೆ ಸನ್ನಿ ಅದ್ಯಾವಾಗ ಗರ್ಭಿಣಿಯಾಗಿದ್ಲು ಅಂತಾ ಅಚ್ಚರಿ ಪಡಬೇಡಿ. ಸನ್ನಿ ಲಿಯೋನ್ ಮತ್ತವಳ ಪತಿ ಡೇನಿಯಲ್ ವೆಬರ್ ಭಾರತದ ಹೆಣ್ಣು ಮಗುವೊಂದನ್ನು ದತ್ತು ಪಡೆದಿದ್ದಾರೆ. ಮಹಾರಾಷ್ಟ್ರದ ಲಾತುರ್ ನ 21 ತಿಂಗಳ ಪುಟಾಣಿಯನ್ನು ಮಗಳಾಗಿ ಸ್ವೀಕಾರ ಮಾಡಿದ್ದಾರೆ.

sunny

ಈ ಮಗುವಿನ ಹೆಸರು ನಿಶಾ ಕೌರ್ ವೆಬರ್. ಮಗುವಿನ ಫೋಟೋ ನೋಡ್ತಿದ್ದಂತೆ ಅವಳನ್ನೇ ದತ್ತು ಪಡೆಯಬೇಕು ಅಂತಾ ಸನ್ನಿ ನಿರ್ಧರಿಸಿ ಬಿಟ್ಟಿದ್ದರಂತೆ. ಹಾಗಾಗಿ ಅತ್ಯಂತ ಶೀಘ್ರವಾಗಿ ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಿ ನಿಶಾಳನ್ನು ದತ್ತು ಪಡೆದಿದ್ದಾರೆ. ಮಗುವನ್ನು ಹೊಂದಲು 9 ತಿಂಗಳು ಸಮಯ ಬೇಕು. ಆದ್ರೆ ನಾವು ಮೂರು ವಾರಗಳಲ್ಲಿ ಮಗು ಪಡೆದಿದ್ದೇವೆ ಅಂತಾ ಹೇಳಿದ್ದಾಳೆ.

2 ವರ್ಷಗಳ ಹಿಂದೆ ಅನಾಥಾಶ್ರಮವೊಂದಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸನ್ನಿ ಲಿಯೋನ್ ದಂಪತಿ ಅರ್ಜಿ ಸಲ್ಲಿಸಿದ್ರು. ಅದಕ್ಕೂ ಮೊದಲು ಮಗುವನ್ನು ದತ್ತು ಪಡೆಯಬೇಕೆಂಬ ಕಲ್ಪನೆಯೂ ಅವರಿಗಿರಲಿಲ್ಲ. ಅನಾಥ ಮಕ್ಕಳನ್ನು ನೋಡ್ತಿದ್ದಂತೆ ಒಂದು ಮಗುವಿಗಾದ್ರೂ ಆಸರೆಯಾಗಬೇಕೆಂಬ ಹಂಬಲ ಮೂಡಿತ್ತು. ಮಗುವಿನ ಹೆಸರನ್ನು ಕೂಡ ಬದಲಾಯಿಸದೇ ಇರಲು ಸನ್ನಿ ನಿರ್ಧರಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...