alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಲಿಕಾನ್ ಸಿಟಿಯಲ್ಲಿ ಮಿಂಚು ಹರಿಸಿದ ಸನ್ನಿ

sunny 741 mn

ಬೆಂಗಳೂರು: ಒಂದು ಕಾಲದಲ್ಲಿ ನೀಲಿ ಚಿತ್ರಗಳ ರಾಣಿಯಾಗಿದ್ದ ಸನ್ನಿಲಿಯೋನ್ ಈಗ ಸವಾಲೊಡ್ಡುವ ಪಾತ್ರಗಳಲ್ಲಿಯೂ ಮಿಂಚುತ್ತಿದ್ದಾರೆ. ಐಟಂ ಸಾಂಗ್ ಗಳಲ್ಲಿಯೂ ಕಾಣಿಸಿಕೊಂಡು ಪಡ್ಡೆ ಹೈಕಳ ನಿದ್ದೆಗೆಡಿಸಿದ್ದಾರೆ. ಇಂತಹ ಸನ್ನಿ ಲಿಯೋನ್ ಬೆಂಗಳೂರಿಗೆ ಬಂದಿದ್ದರು.

ಕನ್ನಡದಲ್ಲಿ ‘ಜೋಗಿ’ ಪ್ರೇಮ್ ಅಭಿನಯದ ‘ಡಿಕೆ’ ಹಾಗೂ ಇಂದ್ರಜಿತ್ ಲಂಕೇಶ್ ನಿರ್ದೇಶನ ಮಾಡಿದ್ದ ‘ಲವ್ ಯೂ ಆಲಿಯಾ’ ಸಿನಿಮಾಗಳಲ್ಲಿ ಸನ್ನಿ ಲಿಯೋನ್ ಕಾಣಿಸಿಕೊಂಡಿದ್ದಾರೆ. ಆರ್.ಜಿ. ಇಂಟರ್ ನ್ಯಾಷನಲ್ ಕಂಪನಿಯ ಗೋಲ್ಡ್ ಫಾಗ್ ಎನರ್ಜಿ ಡ್ರಿಂಕ್ ಗೆ ಸನ್ನಿ ಲಿಯೋನ್ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಈ ಗೋಲ್ಡ್ ಫಾಗ್ ಎನರ್ಜಿ ಡ್ರಿಂಕ್ ಲಾಂಚ್ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆದಿದ್ದು, ಇದರ ಅಂಗವಾಗಿ ಸನ್ನಿ ಲಿಯೋನ್ ಬೆಂಗಳೂರಿಗೆ ಆಗಮಿಸಿದ್ದರು. ಅವರನ್ನು ಕಂಡ ಅಭಿಮಾನಿಗಳು ಪುಳಕಗೊಂಡರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸನ್ನಿ ಲಿಯೋನ್, ಕನ್ನಡದಲ್ಲಿ ಎರಡು ಸಿನಿಮಾಗಳ ನಂತರ ಆಫರ್ ಬಂದಿಲ್ಲ, ಬಂದರೆ ನಟಿಸಲು ರೆಡಿಯಾಗಿದ್ದೇನೆ ಎಂದರು. ‘ಮಸ್ತಿಜಾದೆ’ ಬಾಲಿವುಡ್ ನ ನನ್ನ ಕೆರಿಯರ್ ನಲ್ಲೇ ಉತ್ತಮ ಚಿತ್ರವಾಗಿದೆ. ‘ಒನ್ ನೈಟ್ ಸ್ಟ್ಯಾಂಡ್’ ಹಾಗೂ ‘ಬಿ ಮ್ಯಾನ್ ಲವ್’ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...