alex Certify
ಕನ್ನಡ ದುನಿಯಾ       Mobile App
       

Kannada Duniya

ಸನ್ನಿ ಲಿಯೋನ್ ಕಾಂಡೋಮ್ ಜಾಹೀರಾತಿನಲ್ಲೇನಿದೆ?

ನಟಿ ಸನ್ನಿ ಲಿಯೋನ್ ಅಭಿನಯಿಸಿರೋ ಮ್ಯಾನ್ ಫೋರ್ಸ್ ಕಾಂಡೋಮ್ ಜಾಹೀರಾತು ವಿವಾದದ ಕೇಂದ್ರ ಬಿಂದುವಾಗಿದೆ. ನವರಾತ್ರಿ ಬಗ್ಗೆ ಉಲ್ಲೇಖವಿರುವ ಕಾಂಡೋಮ್ ಜಾಹೀರಾತಿನ ಬ್ಯಾನರ್ ಗಳು ಗುಜರಾತ್ ನಲ್ಲಿ ರಾರಾಜಿಸುತ್ತಿವೆ.

ಈ ಜಾಹೀರಾತು ಹಲವರ ಕೆಂಗಣ್ಣಿಗೂ ಗುರಿಯಾಗಿದೆ. ‘ದಿ ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್’ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಗೆ ಪತ್ರ ಬರೆದಿದೆ.

ಈ ಜಾಹೀರಾತಿನಲ್ಲಿ ನಮ್ಮ ಸಾಂಸ್ಕೃತಿಕ ಮೌಲ್ಯವನ್ನು ಪಣಕ್ಕಿಟ್ಟು, ಉತ್ಪನ್ನದ ಮಾರಾಟ ಹೆಚ್ಚಿಸಿಕೊಳ್ಳಲು ಬೇಜವಾಬ್ಧಾರಿ ಮತ್ತು ಅಪಕ್ವವಾದ ಪ್ರಯತ್ನ ಮಾಡಲಾಗಿದೆ ಅಂತಾ ದೂರು ನೀಡಿದೆ.  ಈ ಜಾಹೀರಾತಿಗೆ ನಿಷೇಧ ಹೇರಬೇಕು ಅನ್ನೋದು ಅವರ ಒತ್ತಾಯ.

ನವರಾತ್ರಿ ಒಂದು ಧಾರ್ಮಿಕ ಆಚರಣೆ. ಹಿಂದುಗಳ ಪಾಲಿಗೆ ಪವಿತ್ರ ಹಬ್ಬ. ಅದನ್ನು ಕಾಂಡೋಮ್ ಜಾಹೀರಾತಿನಲ್ಲಿ ಬಳಸಿಕೊಳ್ಳುವುದು ಅಕ್ಷಮ್ಯ. ಇಂತಹ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ನಟ, ನಟಿಯರ ವಿರುದ್ಧವೂ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ. ಟ್ವಿಟ್ಟರ್ ನಲ್ಲೂ ಸನ್ನಿಯ ಈ ಜಾಹೀರಾತು ಸುದ್ದಿ ಮಾಡಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...