alex Certify
ಕನ್ನಡ ದುನಿಯಾ       Mobile App
       

Kannada Duniya

ಸನ್ನಿ ಲಿಯೋನ್ ಐಷಾರಾಮಿ ಬದುಕು ಹೇಗಿದೆ ಗೊತ್ತಾ?

ಬಾಲಿವುಡ್ ಬೇಬಿ ಡಾಲ್ ಸನ್ನಿ ಲಿಯೋನ್. ಪೋರ್ನ್ ಚಿತ್ರದ ನಂತ್ರ ಬಾಲಿವುಡ್ ಗೆ ಎಂಟ್ರಿಯಾದ್ರೂ ಸನ್ನಿ ಲಿಯೋನ್ ಗೆ ಬಾಲಿವುಡ್ ನಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ. ಸನ್ನಿ 2012 ರಲ್ಲಿ ಬಾಲಿವುಡ್ ಗೆ ಕಾಲಿಟ್ಟಿದ್ದು, ಈವರೆಗೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾಳೆ.

37 ವರ್ಷದ ಸನ್ನಿ ಈಗ ಸಾಮಾಜಿಕ ಜಾಲತಾಣದಲ್ಲಿ ಒಂದು ಫೋಟೋ ಹಾಕಿದ್ರೂ ಜನ ನಾ ಮುಂದು ತಾ ಮುಂದು ಅಂತಾ ನೋಡ್ತಾರೆ. ಸನ್ನಿ ಜೀವನ ಚರಿತ್ರೆ ಸದ್ಯ ವೆಬ್ ಸರಣಿಯಾಗಿ ಬರ್ತಿದೆ. ಸನ್ನಿ ಲಿಯೋನ್ ಹಾಟ್ನೆಸ್ ಬಗ್ಗೆ ಬಹುತೇಕರಿಗೆ ಗೊತ್ತು. ಆದ್ರೆ ಜೀವನದ ಬಗ್ಗೆ ಅನೇಕರಿಗೆ ಗೊತ್ತಿಲ್ಲ. ಸನ್ನಿ ಸಿನಿಮಾ ಒಂದೇ ಅಲ್ಲ ಬ್ಯುಸಿನೆಸ್ ಮೂಲಕವೂ ಹಣ ಸಂಪಾದನೆ ಮಾಡ್ತಿದ್ದಾಳೆ.

ಐಷಾರಾಮಿ ಕಾರುಗಳು ಸನ್ನಿ ಬಳಿಯಿವೆ. ಕಾರಿನಲ್ಲಿ ಲಾಂಗ್ ಡ್ರೈವ್ ಹೋಗಲು ಸನ್ನಿ ಇಷ್ಟಪಡ್ತಾಳೆ. ಸನ್ನಿ ಬಳಿ ಬಿಎಂಡಬ್ಲ್ಯೂ 7 ಸರಣಿಯ ಕಾರಿದೆ. ಆಡಿ ಎ 5 ಕಾರಿನ ಬೆಲೆ 55 ಲಕ್ಷ ರೂಪಾಯಿಯಾದ್ರೆ ಬಿಎಂಡಬ್ಲ್ಯು 7 ಸರಣಿ ಕಾರಿನ  ಬೆಲೆ 75 ಲಕ್ಷ ರೂಪಾಯಿ. ಒಟ್ಟೂ ಸನ್ನಿ ಬಳಿ 1.5 ಕೋಟಿ ಮೌಲ್ಯದ ಕಾರಿದೆ.

ಸನ್ನಿ ಮುಂಬೈನಲ್ಲಿ ವಾಸವಾಗಿದ್ದಾಳೆ. ಆದ್ರೆ ಲಾಸ್ ಏಂಜಲೀಸ್ ನಲ್ಲಿ 19 ಕೋಟಿ ರೂಪಾಯಿ ಮೌಲ್ಯದ ಮನೆಯಿದೆ. ಐದು ಬೆಡ್ ರೂಂ ಮನೆಯಿದೆ. ಖಾಸಗಿ ಈಜುಕೊಳ, ತೋಟ, ಮೂವಿ ಥಿಯೇಟರ್ ಮನೆಯಲ್ಲಿದೆ. ಮುಂಬೈನಲ್ಲಿ 3 ಬೆಡ್ ರೂಮಿನ ಫ್ಲಾಟ್ ಇದೆ.ಇದ್ರ ಬೆಲೆ 3 ಕೋಟಿ ರೂಪಾಯಿ.

ಸನ್ನಿ Lust ಹೆಸರಿನ ಪರ್ಫ್ಯೂಮ್ ಬ್ರ್ಯಾಂಡ್ ಮಾಲೀಕಳಾಗಿದ್ದಾಳೆ. 65 ಕೋಟಿ ಮೌಲ್ಯದ ಈ ಕಂಪನಿಯನ್ನು ಕೆಲ ದಿನಗಳ ಹಿಂದಷ್ಟೇ ಶುರು ಮಾಡಿದ್ದಾಳೆ. ಇದು ಆನ್ಲೈನ್ ನಲ್ಲಿ ಮಾರಾಟವಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...