alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಟ್ಟೇರಿತು ಸುನಾಮಿ ಕಿಟ್ಟಿಯ ‘ಆದಿವಾಸಿ’

sunami-kannada

‘ಡ್ಯಾನ್ಸಿಂಗ್ ಸ್ಟಾರ್’, ‘ಇಂಡಿಯನ್’ ಹಾಗೂ ‘ಬಿಗ್ ಬಾಸ್’ ರಿಯಾಲಿಟಿ ಶೋಗಳಲ್ಲಿ ಮಿಂಚಿದ್ದ ಸುನಾಮಿ ಕಿಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಸಿನಿಮಾ ಸೆಟ್ಟೇರಿದೆ.

ಸಿನಿಮಾದಲ್ಲಿ ನಟಿಸಬೇಕೆಂದು 2 ವರ್ಷಗಳಿಂದ ಕಾಯುತ್ತಿದ್ದ ಕಿಟ್ಟಿಯ ಆಸೆ ಕೈಗೂಡಿದ್ದು, ‘ಆದಿವಾಸಿ – ಕಾಡೇ ನನ್ನ ಆಸ್ತಿ’ ಸಿನಿಮಾದಲ್ಲಿ ಕಿಟ್ಟಿ ಅಭಿನಯಿಸುತ್ತಿದ್ದಾರೆ.

ಪಿ. ಮೂರ್ತಿ ನಿರ್ದೇಶನ, ಕೆಂಪರಾಜ್ ನಿರ್ಮಾಣ ಮಾಡಿರುವ ಈ ಚಿತ್ರ ಕಂಠೀರವ ಸ್ಟುಡಿಯೋದಲ್ಲಿ ಸೆಟ್ಟೇರಿದ್ದು, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕ್ಲಾಪ್ ಮಾಡುವ ಮೂಲಕ ಚಿತ್ರ ತಂಡಕ್ಕೆ ಶುಭಕೋರಿದ್ದಾರೆ.

ಕಾಡಿನ ಜೀವನ, ಆದಿವಾಸಿಗಳ ಬದುಕು, ಬವಣೆಯನ್ನು ಈ ಚಿತ್ರ ಒಳಗೊಂಡಿದೆ. ರಿಯಾಲಿಟಿ ಶೋ ಮೂಲಕ ಮನೆ ಮಾತಾಗಿದ್ದ ಕಿಟ್ಟಿ ಈಗ ಸಿನಿಮಾದಲ್ಲಿ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ. ಶಿಲ್ಪಾ ಎಂಬ ಹೊಸ ನಾಯಕಿ ಅವರೊಂದಿಗೆ ಅಭಿನಯಿಸಲಿದ್ದಾರೆ. ಶಿವಮೊಗ್ಗ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...