alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಯಾನ್ಸರ್ ನಿಂದ ಬಳಲುತ್ತಿದ್ದ ನಟಿ ಇನ್ನಿಲ್ಲ

ಹಿಂದಿ ಚಿತ್ರ ಇಂಗ್ಲೀಷ್-ವಿಂಗ್ಲೀಷ್ ಚಿತ್ರದಲ್ಲಿ ದಿವಂಗತ ನಟಿ ಶ್ರೀದೇವಿ ಸಹೋದರಿಯಾಗಿ ನಟಿಸಿದ್ದ ಸುಜಾತಾ ಕುಮಾರ್ ಇಹಲೋಕ ತ್ಯಜಿಸಿದ್ದಾರೆ. ಸುಜಾತಾ ಮೆಟಾಸ್ಟಟಿಕ್ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದರು. ಸುಜಾತಾ ಸಹೋದರಿ ಸುಚಿತ್ರಾ ಕೃಷ್ಣಮೂರ್ತಿ ಫೇಸ್ಬುಕ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ನಟಿ ಸುಜಾತಾ ಇನ್ನಿಲ್ಲ. ಆಗಸ್ಟ್ 19,2018 ರ ರಾತ್ರಿ 11.26ಕ್ಕೆ ಸುಜಾತಾ ನಿಧನರಾಗಿದ್ದಾರೆ. ಜೀವನ ಇನ್ಮುಂದೆ ಮೊದಲಿನಂತಿರಲು ಸಾಧ್ಯವಿಲ್ಲ. ಆಗಸ್ಟ್ 20 ರ ಬೆಳಿಗ್ಗೆ ಸುಜಾತಾ ಅಂತ್ಯಕ್ರಿಯೆ ನಡೆಯಲಿದೆ ಎಂದು ಸುಚಿತ್ರಾ ಫೇಸ್ಬುಕ್ ನಲ್ಲಿ ಹಾಕಿದ್ದಾರೆ.

ಸುಜಾತಾ ಕ್ಯಾನ್ಸರ್ ನ ನಾಲ್ಕನೇ ಹಂತದಲ್ಲಿದ್ದರು. ಕೆಲ ಅಂಗಗಳು ಕೆಲಸ ನಿಲ್ಲಿಸಿದ್ದವು. ಇಂಗ್ಲೀಷ್-ವಿಂಗ್ಲೀಷ್ ಚಿತ್ರ ಬಿಡುಗಡೆಗೂ ಮುನ್ನ 2012ರಲ್ಲಿ ಸುಜಾತಾ ಕ್ಯಾನ್ಸರ್ ನಿಂದ ಗುಣಮುಖನಾಗಿದ್ದೇನೆಂದು ಹೇಳಿದ್ದರು. ಆದ್ರೆ ಮತ್ತೊಮ್ಮೆ ಕ್ಯಾನ್ಸರ್ ಸುಜಾತಾ ದೇಹ ಪ್ರವೇಶ ಮಾಡಿತ್ತು. ಸುಜಾತಾ ಚಿತ್ರವಲ್ಲದೆ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇಂಗ್ಲೀಷ್ ವಿಂಗ್ಲೀಷ್ ಮೊದಲು ಕೆಲ ಚಿತ್ರಗಳಲ್ಲೂ ಸುಜಾತಾ ನಟಿಸಿದ್ದರು. ಆದ್ರೆ ಯಾವ ಚಿತ್ರವೂ ಯಶಸ್ಸು ಕಂಡಿರಲಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...