alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಹ್ಲಿ ಪತ್ನಿಯನ್ನು ಕೂರಿಸಿಕೊಂಡು ದಿನವಿಡಿ ಸೈಕಲ್ ತುಳಿದ ವರುಣ್

ನಟನೆ ನಿಜಕ್ಕೂ ಕಷ್ಟದ ಕೆಲಸ.  ನಾಯಕಿಯನ್ನು ಪಿಲಿಯನ್ ಮೇಲೆ ಕೂರಿಸಿಕೊಂಡು 10 ಗಂಟೆ ಸೈಕಲ್ ತುಳಿಯೋದು ಅಂದ್ರೆ ಸಾಮಾನ್ಯದ ಮಾತಲ್ಲ. ನಟ ವರುಣ್ ಧವನ್ ಈ ಸಾಹಸ ಮಾಡಿದ್ದಾರೆ.

ಸೂಯಿ ಧಾಗಾ ಚಿತ್ರಕ್ಕಾಗಿ ವರುಣ್ ಧವನ್ ಚಂದೇರಿಯ ಬಿರುಬಿಸಿಲ ನಡುವೆ 10 ಗಂಟೆ ಸೈಕಲ್ ತುಳಿದಿದ್ದಾರಂತೆ. ಯಶ್ ರಾಜ್ ಫಿಲ್ಮ್ಸ್ ವರುಣ್ ಧವನ್ ಹಾಗೂ ಅನುಷ್ಕಾ ಶರ್ಮಾ ಸೈಕಲ್ ಸವಾರಿಯ ಫೋಟೋವನ್ನು ಶೇರ್ ಮಾಡಿದೆ.

ವರುಣ್ ಹಾಗೂ ಅನುಷ್ಕಾ ಇಬ್ಬರೂ ಈ ಚಿತ್ರದಲ್ಲಿ ಡಿಫರೆಂಟ್ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ವರುಣ್ ಮೀಸೆ ಬಿಟ್ಟುಕೊಂಡು ಥೇಟ್ ಹಳ್ಳಿ ಹೈದನಂತೆ ಕಾಣ್ತಿದ್ದಾರೆ.

ಅನುಷ್ಕಾ ಸೀರೆ ಉಟ್ಟು, ತಲೆ ಮೇಲೆ ಸೆರಗು ಹೊದ್ದು ಅಪ್ಪಟ ಗೃಹಿಣಿಯಾಗಿದ್ದಾಳೆ. ಶರತ್ ಕಟಾರಿಯಾ ಈ ಚಿತ್ರದ ನಿರ್ದೇಶಕರು. ಸೆಪ್ಟೆಂಬರ್ 28ಕ್ಕೆ ಚಿತ್ರ ರಿಲೀಸ್ ಆಗಲಿದೆ. ವರುಣ್ ಹಾಗೂ ಅನುಷ್ಕಾ ಇಬ್ಬರಿಗೂ ಈ ಚಿತ್ರದಲ್ಲಿನ ಪಾತ್ರಕ್ಕಾಗಿ ತರಬೇತಿ ನೀಡಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...