alex Certify
ಕನ್ನಡ ದುನಿಯಾ       Mobile App
       

Kannada Duniya

ದೇಸಿ ಗರ್ಲ್ ಅವತಾರದಲ್ಲಿ ಕೊಹ್ಲಿ ಪತ್ನಿ

ಮೇಕ್ ಇನ್ ಇಂಡಿಯಾ ಥೀಮ್ ಮೇಲೆ ನಿರ್ಮಾಣವಾದ ಸೂಯಿ ದಾಗ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಟ್ರೈಲರ್ ನಲ್ಲಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹಾಗೂ ವರುಣ್ ಧವನ್ ದೇಸಿ ಅವತಾರವನ್ನು ನೋಡಬಹುದಾಗಿದೆ. ಚಿತ್ರ ಸೆಪ್ಟೆಂಬರ್ 28ರಂದು ತೆರೆಗೆ ಬರಲಿದೆ.

ಶರತ್ ಕಟಾರಿಯಾ ನಿರ್ದೇಶನದಲ್ಲಿ ಚಿತ್ರ ಮೂಡಿ ಬಂದಿದೆ. ಸ್ವಂತ ಉದ್ಯೋಗ ಶುರು ಮಾಡುವ ಪತಿ-ಪತ್ನಿ ಕಥೆ ಇದಾಗಿದೆ. ಉದ್ಯೋಗದಲ್ಲಿ ಕಿರಿಕಿರಿ ಅನುಭವಿಸುವ ನಾಯಕ, ಪತ್ನಿ ಮಾತು ಕೇಳಿ ಹೊಲಿಗೆ ಉದ್ಯೋಗ ಶುರು ಮಾಡ್ತಾನೆ. ಆತನಿಗೆ ಪತ್ನಿ ನೆರವಾಗ್ತಾಳೆ. ಇದು ಚಿತ್ರ ಕಥೆಯಾಗಿದೆ.

ಚಿತ್ರವನ್ನು ದೆಹಲಿ ಹಾಗೂ ಮಧ್ಯಪ್ರದೇಶದಲ್ಲಿ ಶೂಟಿಂಗ್ ಮಾಡಲಾಗಿದೆ. ಈ ಹಿಂದೆಯೇ ಚಿತ್ರದ ಅನೇಕ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಚಿತ್ರದ ಮೇಲೆ ಅನುಷ್ಕಾ ಸೇರಿದಂತೆ ಕಲಾವಿದರು ಸಾಕಷ್ಟು ನಿರೀಕ್ಷೆಯಿಟ್ಟುಕೊಂಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...