alex Certify
ಕನ್ನಡ ದುನಿಯಾ       Mobile App
       

Kannada Duniya

ಶೀಘ್ರವೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾನೆ ಈ ನಟ

ಬಾಲಿವುಡ್ ನಟ ವರುಣ್ ಧವನ್ ಅಭಿಮಾನಿಗಳಿಗೊಂದು ಖುಷಿ ಸುದ್ದಿ. ಡೇವಿಡ್ ಧವನ್ ಮಗ ವರುಣ್ ಧವನ್ ಶೀಘ್ರವೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ವಿಷ್ಯವನ್ನು ಫಿಲ್ಮ್  ಫೇರ್   ಗೆ ನೀಡಿದ ಸಂದರ್ಶನದಲ್ಲಿ ವರುಣ್ ಧವನ್ ಹೇಳಿದ್ದಾರೆ.

ವರುಣ್ ಧವನ್ ಪ್ರೇಯಸಿ ನತಾಶಾ ದಲಾಲ್ ಜೊತೆ ಮದುವೆಯಾಗಲಿದ್ದಾರಂತೆ. ಅನುಷ್ಕಾ ಶರ್ಮಾ ಜೊತೆ ಸೂಯಿ ಧಾಗ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿರುವ ವರುಣ್ ಧವನ್ ಆಗಾಗ ನತಾಶಾ ಜೊತೆ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದಾರೆ. ಈವರೆಗೆ ನತಾಶಾ ಬಗ್ಗೆ ವರುಣ್ ಏನೂ ಹೇಳಿರಲಿಲ್ಲ. ಆದ್ರೀಗ ಪ್ರೇಯಸಿಯನ್ನು ಹೊಗಳಿದ್ದಾರೆ.

ನನ್ನ ಮೊದಲ ಪ್ರೀತಿ ಚಿತ್ರ. ನಂತ್ರ ನತಾಶಾ. ನನ್ನನ್ನು ನತಾಶಾನಷ್ಟು ಯಾರೂ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲವೆಂದು ಧವನ್ ಹೇಳಿದ್ದಾರೆ. ನತಾಶಾ ನನ್ನ ಮಧ್ಯೆ ಒಳ್ಳೆ ಹೊಂದಾಣಿಕೆಯಿದೆ ಎಂದು ಅವ್ರು ಹೇಳಿದ್ದಾರೆ. ನಾನು ನಟ ಎನ್ನುವ ಕಾರಣಕ್ಕೆ ನತಾಶಾ ನನ್ನ ಪ್ರೀತಿ ಮಾಡ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸಿರುವ ವರುಣ್, ನತಾಶಾ ಹಾಗೂ ನನ್ನ ಮಧ್ಯೆ ಅನೇಕ ವರ್ಷಗಳಿಂದ ಸ್ನೇಹವಿದೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...