alex Certify
ಕನ್ನಡ ದುನಿಯಾ       Mobile App
       

Kannada Duniya

ಅಭಿಮಾನಿಗಳನ್ನು ಸೆಳೆಯುತ್ತಿದೆ ಅನುಷ್ಕಾ ಚಿತ್ರದ ಈ ಹಾಡು

ಬಾಲಿವುಡ್ ನ ಬಹು ನಿರೀಕ್ಷಿತ ಸುಯಿ ಧಾಗಾ ಚಿತ್ರದ ಮೊದಲ ಹಾಡು ಬಿಡುಗಡೆ ಆಗಿದೆ. ಚಿತ್ರದಲ್ಲಿ ವರುಣ್ ಧವನ್ ಹಾಗೂ ಅನುಶ್ಕಾ ಶರ್ಮಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುಯಿ ಧಾಗಾ ಚಿತ್ರದ ಮೊದಲ ಹಾಡು ಚಾವ್ ಲಾಗಾ, ಸ್ಟಾರ್ ನಟರ ನೈಜ ಅಭಿನಯ ಅಭಿಮಾನಿಗಳನ್ನು ಆಕರ್ಷಿಸುತ್ತಿದೆ.

ಸುಯಿ ಧಾಗಾ ಚಿತ್ರಕ್ಕೆ ಅನು ಮಲಿಕ್ ಸಂಗೀತ ನೀಡಿದ್ದಾರೆ. ಸದ್ಯ ಸದ್ದು ಮಾಡುತ್ತಿರುವ ಹಾಡಿಗೆ, ಪಪೂನ್ ಹಾಗೂ ರೊಂಕಿನಿ ಗುಪ್ತಾ ಕಂಠದಾನ ಮಾಡಿದ್ದಾರೆ. ಮೂರು ನಿಮಿಷದ ವಿಡಿಯೋ, ಅಭಿಮಾನಿಗಳನ್ನು ಆಕರ್ಷಿಸಿದೆ. ತನ್ನ ತಾಯಿಗೆ ಅನುಶ್ಕಾ ಶರ್ಮಾ, ತಮ್ಮ ಪ್ರಿಯತಮನ ಜೊತೆ ಸುಖವಾಗಿರೋದಾಗಿ ಹೇಳುತ್ತಲೆ, ಹಾಡು ಆರಂಭವಾಗುತ್ತದೆ. ಸ್ಟಾರ್ ನಟರಾದ ವರುಣ್ ಧವನ್ ಹಾಗೂ ಅನುಷ್ಕಾ ಕೆಮೆಸ್ಟ್ರಿ ವರ್ಕ್ ಔಟ್ ಆಗಿದೆ. ಈ ವಿಡಿಯೋದಲ್ಲಿ ಸ್ಟಾರ್ ಗಳು ಎದುರಿಸಿದ ಸವಾಲುಗಳನ್ನು ಅಚ್ಚುಕಟ್ಟಾಗಿ ಹಿಡಿದಿಟ್ಟಿದ್ದಾರೆ. ಈ ಚಿತ್ರದ ಹಾಡನ್ನು ವರುಣ್, ಅನುಷ್ಕಾ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ.

ಈ ಚಿತ್ರದಲ್ಲಿ ವರುಣ್ ಧವನ್, ಟೈಲರ್ ಕೆಲಸಗಾರನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕಾಗಿ ವರುಣ್ ಮೂರು ತಿಂಗಳ ತರಬೇತಿಯನ್ನು ಸಹ ಪಡೆದಿದ್ದಾರೆ. ಸದ್ಯ ವರುಣ್ ಹಾಗೂ ಅನುಷ್ಕಾ ಜೋಡಿ ಚಿತ್ರದ ಪ್ರಚಾರದಲ್ಲಿ ಫುಲ್ ಬ್ಯುಸಿ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...