alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಹ್ಲಿ ಪತ್ನಿ ಅನುಷ್ಕಾಗೆ ಕಾಡ್ತಿದೆ ಈ ಖಾಯಿಲೆ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಫಿಟ್ ನಟಿಯರಲ್ಲಿ ಒಬ್ಬರು. ಕೆಲಸದಲ್ಲಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಳ್ಳುವ ಅನುಷ್ಕಾ ಸದ್ಯ ಸೂಯಿ ಧಾಗಾ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಿದ್ದಾರೆ. ಈ ಮಧ್ಯೆ ಅನುಷ್ಕಾ ಅಭಿಮಾನಿಗಳಿಗೆ ಕಹಿ ಸುದ್ದಿಯೊಂದು ಬಂದಿದೆ.

ಇತ್ತೀಚಿನ ದಿನಗಳಲ್ಲಿ ಅನುಷ್ಕಾ bulging disc ಹೆಸರಿನ ಖಾಯಿಲೆಯಿಂದ ಬಳಲುತ್ತಿದ್ದಾರಂತೆ. ಈ ಖಾಯಿಲೆಗೆ ಚಿಕಿತ್ಸೆ ನಡೆಯುತ್ತಿದೆ. ಇನ್ನೂ ನಾಲ್ಕೈದು ವಾರ ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ. ಒಂದು ಕಡೆ ತುಂಬಾ ಸಮಯ ಕುಳಿತುಕೊಳ್ಳಲು ಅನುಷ್ಕಾಗೆ ಸಾಧ್ಯವಾಗ್ತಿಲ್ಲ. ಈ ಮಧ್ಯೆಯೂ ಅನುಷ್ಕಾ ಸೂಯಿ ಧಾಗಾ ಚಿತ್ರದ ಪ್ರಚಾರ ಬಿಟ್ಟಿಲ್ಲ.

ಪ್ರಚಾರ ಚಿತ್ರದ ಕಲೆಕ್ಷನ್ ಮೇಲೆ ಪರಿಣಾಮ ಬೀರುತ್ತೆ ಎನ್ನುವ ಕಾರಣಕ್ಕೆ ಅನುಷ್ಕಾ ನೋವಿನ ಮಧ್ಯೆಯೇ ಪ್ರಚಾರ ಮಾಡ್ತಿದ್ದಾರೆ. ಸೂಯಿ ಧಾಗಾ ಚಿತ್ರ ಸೆಪ್ಟೆಂಬರ್ 28ರಂದು ತೆರೆಗೆ ಬರಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...