alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಕ್ಸ್ ಪ್ಯಾಕ್ ನಲ್ಲಿ ರಾರಾಜಿಸಲಿದ್ದಾರೆ ಕಿಚ್ಚ ಸುದೀಪ್

2 ಸಾಂಗ್ ಮತ್ತು ಕೆಲವು ಪ್ಯಾಚ್ ವರ್ಕ್ ಹೊರತುಪಡಿಸಿ ಕಿಚ್ಚ ಸುದೀಪ್ ‘ದಿ ವಿಲನ್’ ಚಿತ್ರವನ್ನು ಬಹುತೇಕ ಪೂರ್ಣಗೊಳಿಸಿದ್ದು, ಮುಂದಿನ ಚಿತ್ರದಲ್ಲಿ ಬಾಕ್ಸರ್ ಮತ್ತು ಪೈಲ್ವಾನ್ ಪಾತ್ರದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗುತ್ತಿದ್ದಾರೆ.

‘ಹೆಬ್ಬುಲಿ’ ಬಳಿಕ ಸುದೀಪ್ ಮತ್ತು ಕೃಷ್ಣ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ‘ಪೈಲ್ವಾನ್’ ಚಿತ್ರಕ್ಕಾಗಿ ಸುದೀಪ್ ಸಖತ್ ವರ್ಕೌಟ್ ಮಾಡ್ತಿದ್ದಾರೆ.

ಇದಕ್ಕಾಗಿ ಜಿಮ್ ಗೆ ಹೋಗಿ ಕಸರತ್ತು ಮಾಡುತ್ತಿರುವ ಅವರು, ‘ಪೈಲ್ವಾನ್’ ಚಿತ್ರದಲ್ಲಿ ಸಿಕ್ಸ್ ಪ್ಯಾಕ್ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಿರಂತರವಾಗಿ ಜೀತ್ ದೇವಯ್ಯ ಅವರಿಂದ ತರಬೇತಿ ಪಡೆಯುತ್ತಿರುವ ಸುದೀಪ್ ಮಾರ್ಚ್ ಅಂತ್ಯದ ವೇಳೆಗೆ ಇಲ್ಲವೇ ಏಪ್ರಿಲ್ ನಿಂದ ಶೂಟಿಂಗ್ ನಲ್ಲಿ ಪಾಲ್ಗೊಳ್ಳಲಿದ್ದಾರೆ.

ಇದಕ್ಕಿಂತ ಮೊದಲೇ ಅವರು ಥೈಲ್ಯಾಂಡ್ ಗೆ ತೆರಳಿ ಬಾಕ್ಸಿಂಗ್ ತರಬೇತಿ ಪಡೆಯಲಿದ್ದಾರೆ. ‘ಪೈಲ್ವಾನ್’ ಪಾತ್ರಕ್ಕೆ ತಕ್ಕಂತೆ ಸುದೀಪ್ ರೆಡಿಯಾಗುತ್ತಿದ್ದಾರೆ ಎಂದು ನಿರ್ದೇಶಕ ಕೃಷ್ಣ ಹೇಳಿದ್ದಾರೆ. ಸುದೀಪ್ ‘ಪೈಲ್ವಾನ್’ ಆಗಲು ವರ್ಕೌಟ್ ಮಾಡುತ್ತಿರುವುದು ಅಭಿಮಾನಿಗಳ ಕುತೂಹಲವನ್ನು ಹೆಚ್ಚಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...