alex Certify
ಕನ್ನಡ ದುನಿಯಾ       Mobile App
       

Kannada Duniya

ನ್ಯೂಯಾರ್ಕ್ ನಲ್ಲಿ ನಡೆಯಲಿದೆ ಕಿಚ್ಚನ ಹಾಲಿವುಡ್ ಚಿತ್ರದ ಶೂಟಿಂಗ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಲಿವುಡ್ ಚಿತ್ರದಲ್ಲಿ ಅಭಿನಯಿಸಲಿದ್ದು, ಅವರ ಹಾಲಿವುಡ್ ಚೊಚ್ಚಲ ಚಿತ್ರದ ಚಿತ್ರೀಕರಣ ನ್ಯೂಯಾರ್ಕ್ ನಲ್ಲಿ ನಡೆಯಲಿದೆ.

ಆಸ್ಟ್ರೇಲಿಯಾದ ಫಿಲ್ಮ್ ಮೇಕರ್ ಎಡ್ಡಿ ಆರ್ಯ ಮತ್ತು ಕಾರ್ಯನಿರ್ವಾಹಕ ನಿರ್ಮಾಪಕ ನಾಗೇಂದ್ರ ಜಯರಾಮ್ ಅವರು ‘ರೈಸನ್’ ಹೆಸರಿನ ವಿಜ್ಞಾನ –ಕಾಲ್ಪನಿಕ ಚಿತ್ರದ ಪೂರ್ವ ತಯಾರಿ ಮಾಡಿಕೊಂಡಿದ್ದಾರೆ.

ಸುದೀಪ್ ಅವರೊಂದಿಗೆ ಸಮಾಲೋಚನೆ ನಡೆಸಿದ ಚಿತ್ರತಂಡ ಈಗಾಗಲೇ ಫಸ್ಟ್ ಲುಕ್ ಚಿತ್ರೀಕರಿಸಿದೆ. ಫಸ್ಟ್ ಲುಕ್ ಅನ್ನು ಶೀಘ್ರವೇ ಬಿಡುಗಡೆ ಮಾಡಲಿದ್ದೇವೆ ಎಂದು ಎಡ್ಡಿ ಆರ್ಯ ಹೇಳಿದ್ದಾರೆ.

ನ್ಯೂಯಾರ್ಕ್ ನಲ್ಲಿ ನೆಲೆಗೊಂಡಿರುವ ಭಾರತೀಯನ ಪಾತ್ರದಲ್ಲಿ ಸುದೀಪ್ ಕಾಣಿಸಿಕೊಳ್ಳಲಿದ್ದು, ಉಲ್ಕಾಶಿಲೆ ಅಪ್ಪಳಿಸುವ ಪರಿಣಾಮದ ಕಥಾನಕವನ್ನು ಇದು ಒಳಗೊಂಡಿದೆ. ಸುದೀಪ್ ಅವರ ಪಾತ್ರವನ್ನು ನ್ಯೂಯಾರ್ಕ್ ನಲ್ಲಿ ಚಿತ್ರೀಕರಿಸಲು ಪ್ಲಾನ್ ಮಾಡಿಕೊಳ್ಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...