alex Certify
ಕನ್ನಡ ದುನಿಯಾ       Mobile App
       

Kannada Duniya

ಮೆಗಾಸ್ಟಾರ್ ಚಿತ್ರದಲ್ಲಿ ನಟಿಸುತ್ತಿಲ್ಲ ಸುದೀಪ್..!

sudeep

ಮೆಗಾಸ್ಟಾರ್ ಚಿರಂಜೀವಿ ಅವರ 151ನೇ ಸಿನೆಮಾದಲ್ಲಿ ಸ್ಯಾಂಡಲ್ವುಡ್ ನ ಕಿಚ್ಚ ಸುದೀಪ್ ಕೂಡ ನಟಿಸ್ತಾರೆ ಅನ್ನೋ ಸುದ್ದಿಯಿತ್ತು. ಆದ್ರೆ ಚಿತ್ರತಂಡ ಮಾತ್ರ ಇದಕ್ಕೆ ವ್ಯತಿರಿಕ್ತವಾದ ಮಾಹಿತಿ ನೀಡ್ತಿದೆ. ಅದೆಲ್ಲಾ ಗಾಸಿಪ್ ಅಷ್ಟೆ, ಇನ್ನೂ ಚಿತ್ರಕ್ಕೆ ಕಲಾವಿದರ ಆಯ್ಕೆಯಾಗಿಲ್ಲ ಎನ್ನುತ್ತಿದೆ.

ದೊಡ್ಡ ಮಟ್ಟದ ಸಿನೆಮಾ ಮಾಡಬೇಕು ಅನ್ನೋದು ನಿರ್ಮಾಪಕರ ಆಸೆ. ಹಾಗಾಗಿ ಉಳಿದ ಭಾಷೆಗಳ ಚಿತ್ರರಂಗದ ದಿಗ್ಗಜರನ್ನೂ ಕರೆತರುವ ಪ್ರಯತ್ನ ನಡೆಯುತ್ತಿದೆ. ಕನ್ನಡದಿಂದ ಸುದೀಪ್, ತಮಿಳಿನ ಶಿವ ಕಾರ್ತಿಕೇಯನ್ ಹಾಗೂ ಹಿಂದಿ ಚಿತ್ರರಂಗದಿಂದ ಅಮಿತಾಭ್ ಬಚ್ಚನ್ ಈ ಚಿತ್ರದಲ್ಲಿ ನಟಿಸ್ತಾರೆ ಎಂಬ ಸುದ್ದಿಯುತ್ತು.

ಚಿತ್ರತಂಡ ಈಗಾಗ್ಲೇ ಅಮಿತಾಭ್ ಬಚ್ಚನ್ ಗೆ ಅಪ್ರೋಚ್ ಮಾಡಿದೆಯಂತೆ. ಆದ್ರೆ ಸುದೀಪ್ ಹಾಗೂ ಶಿವ ಕಾರ್ತಿಕೇಯನ್ ಗೆ ಇನ್ನೂ ಆಫರ್ ಬಂದಿಲ್ಲ. ಅಕ್ಟೋಬರ್ ನಲ್ಲಿ ಚಿರಂಜೀವಿ ಅವರ 151ನೇ ಚಿತ್ರ ಸೆಟ್ಟೇರಲಿದ್ದು, ರಾಮ್ ಚರಣ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...