alex Certify
ಕನ್ನಡ ದುನಿಯಾ       Mobile App
       

Kannada Duniya

ಕಿಚ್ಚ ಸುದೀಪ್ ಕೈಗೊಂಡ್ರು ಇಂತಹ ತೀರ್ಮಾನ

sudeep-fans-birthday

ಸ್ಟಾರ್ ನಟರಿಗೆ ಸಹಜವಾಗಿಯೇ ಅಭಿಮಾನಿಗಳ ಸಂಖ್ಯೆ ಜಾಸ್ತಿ. ನೆಚ್ಚಿನ ನಟರ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಂಭ್ರಮದಿಂದ ಆಚರಿಸುತ್ತಾರೆ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇನ್ನು ಮುಂದೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರಲು ತೀರ್ಮಾನಿಸಿದ್ದಾರೆ. ತಮ್ಮ ಈ ನಿರ್ಧಾರವನ್ನು ಅಭಿಮಾನಿಗಳಿಗೆ ಹತ್ತಿರವಾಗಿರುವ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ತಿಳಿಸಿದ್ದಾರೆ.

ತಮ್ಮ ನಿರ್ಧಾರವನ್ನು ಅಭಿಮಾನಿಗಳು ಗೌರವಿಸುತ್ತಾರೆ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ನಿಮ್ಮ ಪ್ರೀತಿಗೆ ನಾನು ಚಿರಋಣಿ. ಇಷ್ಟು ದಿನ ನೀವು ತೋರಿದ ಪ್ರೀತಿ ಹೀಗೆಯೇ ಇರಲಿ. ಆದರೆ ನೀವು ದುಡಿದ ಹಣದಿಂದ ಹುಟ್ಟುಹಬ್ಬದ ಸಂದರ್ಭದಲ್ಲಿ ಹಾರ, ಕೇಕ್ ತಂದು, ಫ್ಲೆಕ್ಸ್ ಹಾಕುತ್ತೀರಿ. ಇದರ ಬದಲಿಗೆ ಹಣವನ್ನು ಕಷ್ಟದಲ್ಲಿರುವವರಿಗೆ ಕೊಡಿ. ಹಸಿದವರಿಗೆ ನೀವು ಕೊಡುವ ಹಣದಿಂದ ಹೊಟ್ಟೆ ತುಂಬುತ್ತದೆ. ಜೀವನಕ್ಕೆ ಅನುಕೂಲವಾಗುತ್ತದೆ. ಒಂದು ಹೊತ್ತು ಊಟಮಾಡಲು ಸಾಧ್ಯವಾಗದವರಿಗೆ ಹಣ ಕೊಡಿ. ಅದೇ ನೀವು ನನಗೆ ಕೊಡುವ ದೊಡ್ಡ ಉಡುಗೊರೆ ಎಂದು ಹೇಳಿದ್ದಾರೆ.

ನಾನು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ. ನೀವು ಕೂಡ ಹಣವನ್ನು ಅವಶ್ಯಕತೆ ಇರುವವರಿಗೆ ಕೊಡಿ. 2 ದಶಕಗಳಿಂದ ನೀವು ಕೊಟ್ಟ ಪ್ರೀತಿಗೆ ಋಣಿಯಾಗಿರುವೆ ಎಂದು ತಿಳಿಸಿದ್ದಾರೆ.

ಈ ಮೂಲಕ ಮಾದರಿಯಾಗುವಂತಹ ನಿರ್ಧಾರವನ್ನು ಸುದೀಪ್ ಕೈಗೊಂಡಿದ್ದಾರೆ. ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿ ಹಣ ವ್ಯಯಮಾಡುವ ಬದಲು ಹಸಿದವರಿಗೆ ಕೊಡಿ ಎಂದು ಹೇಳಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...