alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’ ಕಮಲ್, ಸಲ್ಮಾನ್ ಬಗ್ಗೆ ಕಿಚ್ಚ ಹೇಳಿದ್ದೇನು ಗೊತ್ತಾ..?

sudep-ki

ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಹಲವು ಭಾಷೆಗಳಲ್ಲಿ ಮೂಡಿ ಬರುತ್ತಿದೆ. ಹಿಂದಿಯಲ್ಲಿ ಸಲ್ಮಾನ್ ಖಾನ್, ಕನ್ನಡದಲ್ಲಿ ಸುದೀಪ್, ತಮಿಳಿನಲ್ಲಿ ಕಮಲ್ ಹಾಸನ್ ನಿರೂಪಣೆ ಮಾಡಿದ್ದಾರೆ.

ಇನ್ನು ತೆಲುಗಿನಲ್ಲಿ ಜೂನಿಯರ್ ಎನ್.ಟಿ.ಆರ್. ‘ಬಿಗ್ ಬಾಸ್’ ನಿರೂಪಣೆ ಮಾಡ್ತಾರೆ. ಈ ಸ್ಟಾರ್ ಗಳು ತಮ್ಮದೇ ಶೈಲಿಯಲ್ಲಿ ನಿರೂಪಣೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಸುದೀಪ್ ‘ಬಿಗ್ ಬಾಸ್’ ಮೂಲಕ ಕಿರುತರೆಯಲ್ಲಿಯೂ ಯಶಸ್ವಿಯಾಗಿದ್ದು, ‘ಬಿಗ್ ಬಾಸ್’ ಹೊಸ ಸೀಸನ್ ಆರಂಭಕ್ಕೆ ಸಿದ್ಧತೆಗಳು ನಡೆದಿವೆ.

ಸಲ್ಮಾನ್ ಖಾನ್ ಮತ್ತು ಕಮಲ್ ಹಾಸನ್ ಅವರಿಗಿಂತ ಸುದೀಪ್ ಉತ್ತಮವಾಗಿ ಕಾರ್ಯಕ್ರಮ ನಡೆಸಿಕೊಡುತ್ತಾರೆ ಎಂಬುದು ಅಭಿಮಾನಿಗಳ ಅನಿಸಿಕೆಯಾಗಿದೆ.

ಇದನ್ನೇ ಅಭಿಮಾನಿಯೊಬ್ಬರು ಸುದೀಪ್ ಗೆ ಹೇಳಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸುದೀಪ್, ದಿಗ್ಗಜರಾದ ಸಲ್ಮಾನ್ ಖಾನ್ ಮತ್ತು ಕಮಲ್ ಹಾಸನ್ ನನಗೆ ಸ್ಪೂರ್ತಿಯಾಗಿದ್ದಾರೆ. ನಾನು ಇನ್ನೂ ಉತ್ತಮವಾಗಿ ನಿರೂಪಣೆ ಮಾಡಲು ಅವರ ಶೈಲಿ ಸಹಕಾರಿಯಾಗುತ್ತದೆ ಎಂದು ಹೇಳಿದ್ದಾರೆ. ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಸುದೀಪ್, ದಿಗ್ಗಜರ ಕುರಿತಾಗಿ ಮಾಡಿರುವ ಈ ಟ್ವೀಟ್ ಪ್ರಶಂಶೆಗೆ ಪಾತ್ರವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...