alex Certify
ಕನ್ನಡ ದುನಿಯಾ       Mobile App
       

Kannada Duniya

ಅಭಿನಯ ಚಕ್ರವರ್ತಿ ಅಭಿಮಾನಿಗಳಿಗೊಂದು ಸುದ್ದಿ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದು, ಸಖತ್ ಬ್ಯುಸಿಯಾಗಿದ್ದಾರೆ. ಕನ್ನಡ, ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ಅಭಿನಯಿಸಿರುವ ಅವರು ಹಾಲಿವುಡ್ ಚಿತ್ರದಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ.

‘ದಿ ವಿಲನ್’, ‘ಅಂಬಿ ನಿಂಗ್ ವಯಸ್ಸಾಯ್ತೋ’, ‘ಪೈಲ್ವಾನ್’, ‘ಕೋಟಿಗೊಬ್ಬ 3’, ಹಾಲಿವುಡ್ ಚಿತ್ರ ‘ರೈಸನ್’, ತೆಲುಗು ಚಿತ್ರ ‘ಸೈರಾ ನರಸಿಂಹರೆಡ್ಡಿ’ ಹೀಗೆ ಸುದೀಪ್ ಬಿಡುವಿಲ್ಲದೇ ನಟಿಸುತ್ತಿದ್ದು, ಅವರು ಮತ್ತೊಂದು ತಮಿಳು ಚಿತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಸೂಪರ್ ಸ್ಟಾರ್ ರಜನಿಕಾಂತ್ ಅಳಿಯ ಧನುಷ್ ಹಾಗೂ ಕಿಚ್ಚ ಸುದೀಪ್ ಕಾಂಬಿನೇಷನ್ ನಲ್ಲಿ ತಮಿಳು ಚಿತ್ರ ನಿರ್ಮಾಣವಾಗಲಿದೆ. ಇಳಯದಳಪತಿ ವಿಜಯ್ ಅಭಿನಯದ ‘ಮೆರ್ಸಲ್’ ಚಿತ್ರಕ್ಕೆ ಬಂಡವಾಳ ಹೂಡಿದ್ದ ಥೆನೆಂಡಲ್ ಸ್ಟುಡಿಯೋಸ್ ನಿರ್ಮಾಣ ಮಾಡಲಿರುವ ಚಿತ್ರವನ್ನು ಧನುಷ್ ನಿರ್ದೇಶಿಸಿ ನಟಿಸಲಿದ್ದು, ಸುದೀಪ್ ಕೂಡ ಅಭಿನಯಿಸಲು ಒಪ್ಪಿಗೆ ಸೂಚಿಸಿದ್ದಾರೆ.

ಚಿತ್ರದ ಪ್ರಾಥಮಿಕ ಹಂತದ ಕೆಲಸಗಳು ಆರಂಭವಾಗಿವೆ. ಅದ್ಧೂರಿ ವೆಚ್ಚದಲ್ಲಿ ಬಹುತಾರಾಗಣದಲ್ಲಿ ಚಿತ್ರ ನಿರ್ಮಾಣವಾಗಲಿದೆ.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...