alex Certify
ಕನ್ನಡ ದುನಿಯಾ       Mobile App
       

Kannada Duniya

ಸದ್ದಿಲ್ಲದೇ ಸಾಗಿದೆ ಸುದೀಪ್ ಹಾಲಿವುಡ್ ಚಿತ್ರದ ತಯಾರಿ

ಕಿಚ್ಚ ಸುದೀಪ್ ಕನ್ನಡ ಮಾತ್ರವಲ್ಲದೇ ಹಿಂದಿ, ತೆಲುಗು. ತಮಿಳು ಚಿತ್ರಗಳಲ್ಲಿ ಮಿಂಚಿದ್ದಾರೆ. ಬಹುಭಾಷಾ ನಟರಾಗಿರುವ ಸುದೀಪ್ ಇದೇ ಮೊದಲ ಬಾರಿಗೆ ಹಾಲಿವುಡ್ ಚಿತ್ರದಲ್ಲಿ ಅಭಿನಯಿಸಲಿದ್ದಾರೆ.

‘ರೈಸನ್’ ಹೆಸರಿನ ಈ ಚಿತ್ರವನ್ನು ಎಡ್ಡಿ ಆರ್ಯ ನಿರ್ದೇಶಿಸಲಿದ್ದಾರೆ. ಸುದೀಪ್ ಅವರನ್ನು ಭೇಟಿಯಾಗಿರುವ ‘ರೈಸನ್’ ಚಿತ್ರ ತಂಡ ಚಿತ್ರದ ಮೇಕಿಂಗ್ ಕುರಿತಾಗಿ ಮಾತುಕತೆ ನಡೆಸಿದೆ.

‘ದಿ ವಿಲನ್’ ಚಿತ್ರದಲ್ಲಿ ಬ್ಯುಸಿಯಾಗಿರುವ ಸುದೀಪ್ ಬಳಿಕ, ‘ಪೈಲ್ವಾನ್’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಪೈಲ್ವಾನ್’ ಚಿತ್ರದಲ್ಲಿ ಸುದೀಪ್ ಕುಸ್ತಿಪಟು ಮತ್ತು ಬಾಕ್ಸರ್ ಪಾತ್ರದಲ್ಲಿ ಮಿಂಚಲಿದ್ದಾರೆ.

ಇದರ ನಡುವೆಯೇ ‘ರೈಸನ್’ ಶೂಟಿಂಗ್ ನಲ್ಲಿ ಪಾಲ್ಗೊಳ್ಳಲಿದ್ದಾರೆ. ವಿದೇಶದಲ್ಲಿ ಚಿತ್ರೀಕರಣ ನಡೆಯಲಿರುವುದರಿಂದ ಚಿತ್ರ ತಂಡ ಸುದೀಪ್ ಅವರನ್ನು ಭೇಟಿ ಮಾಡಿದೆ. ಶೀಘ್ರವೇ ಸುದೀಪ್ ಅಭಿನಯದ ದೃಶ್ಯಗಳ ಚಿತ್ರೀಕರಣಕ್ಕೆ ಪ್ಲಾನ್ ಮಾಡಲಾಗಿದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...