alex Certify
ಕನ್ನಡ ದುನಿಯಾ       Mobile App
       

Kannada Duniya

ಲಂಡನ್ ಗೆ ಹೊರಟ ‘ದಿ ವಿಲನ್’ ಟೀಂ

vilan-ddd

ಆರಂಭದಿಂದಲೂ ಭಾರೀ ಕುತೂಹಲ ಮೂಡಿಸಿರುವ ‘ದಿ ವಿಲನ್’ ಚಿತ್ರದ ಬ್ಯಾಂಕಾಕ್ ಶೂಟಿಂಗ್ ಮುಕ್ತಾಯವಾಗಿದ್ದು, ಚಿತ್ರತಂಡ ತವರಿಗೆ ವಾಪಸ್ ಆಗಿದೆ.

ಜುಲೈ 2 ನೇ ವಾರದಿಂದ ಲಂಡನ್ ನಲ್ಲಿ ಶೂಟಿಂಗ್ ಶುರುವಾಗಲಿದ್ದು, ಮುಂದಿನ ಹಂತದ ಚಿತ್ರೀಕರಣಕ್ಕೆ ಸಿದ್ಧತೆ ನಡೆಯುತ್ತಿದೆ. ಚಿತ್ರತಂಡ ಲಂಡನ್ ಗೆ ಪ್ರಯಾಣ ಬೆಳೆಸಲಿದೆ.

ಶಿವರಾಜ್ ಕುಮಾರ್ ಲಂಡನ್ ನಲ್ಲಿ ‘ದಿ ವಿಲನ್’ ಶೂಟಿಂಗ್ ಸೆಟ್ ಗೆ ಗ್ರ್ಯಾಂಡ್ ಎಂಟ್ರಿ ಕೊಡಲಿದ್ದಾರೆ. ಬ್ಯಾಂಕಾಕ್ ನಲ್ಲಿ ಥೈಲ್ಯಾಂಡ್ ಫೈಟ್ ಮಾಸ್ಪರ್ ಸಂಯೋಜಿಸಿದ್ದ ಸಾಹಸ ದೃಶ್ಯಗಳಲ್ಲಿ ಸುದೀಪ್ ಭಾಗವಹಿಸಿದ್ದರು. ನಟಿ ಎಮಿ ಜಾಕ್ಸನ್ ಕೂಡ ಬ್ಯಾಂಕಾಕ್ ಚಿತ್ರೀಕರಣದಲ್ಲಿ ಭಾಗವಹಿಸಿದ್ದು, ಅಲ್ಲಿಂದ ಯಶಸ್ವಿಯಾಗಿ ಚಿತ್ರೀಕರಣ ಮುಗಿಸಲಾಗಿದೆ.

ಈಗಾಗಲೇ ಶಿವಮೊಗ್ಗ ಹೊಸ ಜೈಲ್, ಬೆಳಗಾವಿಯ ರಾಮದುರ್ಗದಲ್ಲಿ ಚಿತ್ರೀಕರಣ ನಡೆಸಿದ್ದ ಚಿತ್ರ ತಂಡ ಬ್ಯಾಂಕಾಕ್ ಬಳಿಕ ಲಂಡನ್ ಗೆ ಹೊರಡಲು ರೆಡಿಯಾಗಿದೆ.

ಶಿವರಾಜ್ ಕುಮಾರ್, ಸುದೀಪ್ ಅವರನ್ನು ಒಂದೇ ಚಿತ್ರದಲ್ಲಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರರಾಗಿದ್ದಾರೆ. ‘ಜೋಗಿ’ ಪ್ರೇಮ್ ನಿರ್ದೇಶಿಸಿದ್ದು, ಸಿ.ಆರ್. ಮನೋಹರ್ ನಿರ್ಮಾಣ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...