alex Certify
ಕನ್ನಡ ದುನಿಯಾ       Mobile App
       

Kannada Duniya

ಹೇಗಿದೆ ಗೊತ್ತಾ ಕಿಚ್ಚ ಸುದೀಪ್ ವರ್ಕೌಟ್..?

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ‘ದಿ ವಿಲನ್’ ಬಳಿಕ ‘ಪೈಲ್ವಾನ್’ ಚಿತ್ರಕ್ಕಾಗಿ ರೆಡಿಯಾಗ್ತಿದಾರೆ. ಅವರ ಮೊದಲ ಹಾಲಿವುಡ್ ಚಿತ್ರ ‘ರೈಸನ್’ಗಾಗಿ ತಯಾರಿ ಕೂಡ ನಡೆದಿದೆ.

ಸುದೀಪ್ ಈ ಹಿಂದೆ ಅಭಿನಯಿಸಿದ್ದ ‘ಹೆಬ್ಬುಲಿ’ ಭರ್ಜರಿ ಯಶಸ್ಸು ಕಂಡಿತ್ತು. ಆರ್ಮಿ ಆಫೀಸರ್ ಪಾತ್ರದಲ್ಲಿ ಅವರು ಮಿಂಚಿದ್ದರು.

ಸುದೀಪ್ ‘ಪೈಲ್ವಾನ್’ ಚಿತ್ರದಲ್ಲಿ ಕುಸ್ತಿಪಟು ಮತ್ತು ಬಾಕ್ಸರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಅದಕ್ಕೆ ತಕ್ಕಂತೆ ತಯಾರಿ ನಡೆಸಿದ್ದಾರೆ.

ಬ್ಯಾಡ್ಮಿಂಟನ್, ಕ್ರಿಕೆಟ್ ಮೂಲಕ ಫಿಟ್ ಅಂಡ್ ಫೈನ್ ಆಗಿರುವ ಸುದೀಪ್, ‘ಪೈಲ್ವಾನ್’ ಮತ್ತು ‘ರೈಸನ್’ಗಾಗಿ ದೇಹವನ್ನು ದಂಡಿಸಲಿದ್ದಾರೆ. ಇದಕ್ಕಾಗಿ ವಿಶೇಷ ತರಬೇತಿ ಕೂಡ ಪಡೆಯಲಿದ್ದಾರೆ ಎನ್ನಲಾಗಿದೆ.

ಕೃಷ್ಣ ನಿರ್ದೇಶನದ ‘ಪೈಲ್ವಾನ್’ ಮತ್ತು ಎಡ್ಡಿ ಆರ್ಯ ನಿರ್ದೇಶನದ ‘ರೈಸನ್’ ಚಿತ್ರದಲ್ಲಿ ಸುದೀಪ್ ನೀವೆಂದು ನೋಡಿರದ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...