alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’ ಮನೆಯಲ್ಲಿ ಮತ್ತೆ ಕಾಣಿಸಿಕೊಂಡ ಓಂ ಪ್ರಕಾಶ್

om

‘ಬಿಗ್ ಬಾಸ್’ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟು, ಅನಾರೋಗ್ಯದಿಂದ ಹೊರ ಹೋಗಿದ್ದ ಓಂ ಪ್ರಕಾಶ್ ರಾವ್ ಮತ್ತೆ ಕಾಣಿಸಿಕೊಂಡಿದ್ದಾರೆ. ಭಾನುವಾರದ ‘ಸೂಪರ್ ಸಂಡೇ ವಿತ್ ಸುದೀಪ’ ವೇದಿಕೆಯಲ್ಲಿ ಕಾಣಿಸಿಕೊಂಡ ಅವರು ರಂಜಿಸಿದ್ದಾರೆ. ವೇದಿಕೆಗೆ ಬರುವ ಮೊದಲು ‘ಬಿಗ್ ಬಾಸ್’ ಮನೆಯೊಳಗೆ ಹೋದ ಓಂ ಪ್ರಕಾಶ್ ಅವರನ್ನು ಸದಸ್ಯರು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ.

ಮೊದಲ ವಾರವೇ ನಾಮಿನೇಟ್ ಆಗಿ ಮನೆಯಿಂದ ಹೊರ ಬಂದಿದ್ದ ಮಸ್ತಾನ್ ‘ಸೂಪರ್ ಸಂಡೇ ವಿತ್ ಸುದೀಪ’ ವೇದಿಕೆಯಲ್ಲಿ ಸುದೀಪ್ ಎದುರಿಗೆ ಮನೆಯಲ್ಲಿನ ಅನುಭವ ಬಿಚ್ಚಿಟ್ಟಿದ್ದಾರೆ. ಮನೆಯೊಳಗೆ ಆಟೋಮೊಬೈಲ್ ಡೀಲರ್ ಎಂದು ಹೇಳಿಕೊಂಡು ಹೋಗಿದ್ದ ಮಸ್ತಾನ್ ಶಿವಾಜಿನಗರದ ಕನ್ನಡದಲ್ಲಿ ಮಾತನಾಡಿದ್ದರು. ಅದೇ ರೀತಿಯಲ್ಲಿ ಮಾತಾಡಿ ಎಂದು ಸುದೀಪ್ ಹೇಳಿದಾಗ, ಮಸ್ತಾನ್ ತಮ್ಮ 10 ದಿನದ ಜರ್ನಿಯಲ್ಲಿ ಸದಸ್ಯರೆಲ್ಲರ ಕುರಿತಾದ ಅಭಿಪ್ರಾಯ ಹಾಗೂ ಮನೆಯೊಳಗೆ ಇದ್ದ ಅನುಭವ ಹಂಚಿಕೊಂಡಿದ್ದಾರೆ.

‘ಬಿಗ್ ಬಾಸ್’ ಮನೆಯೊಳಗೆ ಹೋಗುವ ಅವಕಾಶ ಸಿಕ್ಕಿದ್ದು ಖುಷಿಯಾಗಿದೆ. ನಾನು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದರಿಂದ ಏನಾದ್ರು ಸ್ಟ್ರಾಟಜಿ ಮಾಡ್ತಾನೆ ಎಂದು ಎಲ್ಲರೂ ಅಂದುಕೊಂಡಿದ್ದರು. ಪ್ರಥಮ್ ಬಗ್ಗೆ ನೆಗೆಟಿವ್ ಭಾವನೆಯಿಂದ ಒಳಗೆ ಹೋಗಿದ್ದ ನನಗೆ ಅವರೊಂದಿಗೆ ಮಾತನಾಡಿದ್ದು ಒಳ್ಳೆಯ ಅನುಭವ ನೀಡಿದೆ ಎಂದು ಹೇಳಿಕೊಂಡಿದ್ದಾರೆ.

ನಂತರದಲ್ಲಿ ವೇದಿಕೆ ಬಂದಿದ್ದೇ ಓಂ ಪ್ರಕಾಶ್ ರಾವ್. ವೇದಿಕೆಗೆ ಬರುವ ಮೊದಲು ಮನೆಯೊಳಗೆ ಹೋದ ಅವರು ಸದಸ್ಯರೊಂದಿಗೆ ಮಾತನಾಡಿದ್ದಾರೆ. ಹೊರ ಬರುವ ಮೊದಲು ಅವರಿಗೆ ‘ಬಿಗ್ ಬಾಸ್’ ನೀಡಿದ ಅಧಿಕಾರದಂತೆ ಸುಕೃತಾ ಅವರನ್ನು ನಾಮಿನೇಟ್ ಮಾಡಿದ್ದಾರೆ.

ವೇದಿಕೆಯಲ್ಲಿ ಸುದೀಪ್ ಅವರೊಂದಿಗೆ ಮಾತನಾಡಿದ ಓಂ ಪ್ರಕಾಶ್, ಅನಾರೋಗ್ಯದ ಕಾರಣ ಕೆಲವು ಟಾಸ್ಕ್ ಗಳಲ್ಲಿ ಸರಿಯಾಗಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ‘ಬಿಗ್ ಬಾಸ್’ನಲ್ಲಿ ಇದ್ದಷ್ಟು ದಿನ ಸಂತಸದಿಂದ ಇದ್ದೆ. ಇನ್ನು ನಾನು ಏನು ಎಂಬುದನ್ನು ಜನರಿಗೆ ಈ ವೇದಿಕೆ ತಿಳಿಸಿಕೊಟ್ಟಿದೆ ಎಂದು ಹೇಳಿದ್ದಾರೆ. ಮನೆಯೊಳಗಿನ ಸದಸ್ಯರು ಕೆಲವೊಮ್ಮೆ ನಾಟಕೀಯವಾಗಿ ಮಾತನಾಡುವಾಗ ಕೋಪ ಬರುತ್ತಿತ್ತು. ಅದನ್ನು ತಡೆದುಕೊಂಡಿದ್ದೇನೆ. ಮಾಳವಿಕಾ ನನ್ನ ಬಗ್ಗೆ ಕೆಲ ಸದಸ್ಯರ ಬಳಿ ಕೆಟ್ಟ ಅಭಿಪ್ರಾಯಗಳನ್ನು ಹೇಳಿದ್ದರು. ಅದು ನನಗೆ ಗೊತ್ತಾದರೂ ಸುಮ್ಮನಿದ್ದೆ ಎಂದ ಅವರು, ಮನೆಯ ಸದಸ್ಯರು ಸಿನಿಮಾಕ್ಕೆ ಪೂರಕವಾಗಿ ಯಾವ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ ಎಂಬುದನ್ನು ತಮ್ಮದೇ ಶೈಲಿಯಲ್ಲಿ ಹೇಳಿದ್ದು ವಿಶೇಷವಾಗಿತ್ತು.

ಒಂದು ಹಂತದಲ್ಲಿ ಸುದೀಪ್ ಗೂ ನಗು ತಡೆಯಲಾಗಲಿಲ್ಲ. ಅಷ್ಟು ತಮಾಷೆಯಾಗಿತ್ತು ಓಂ ಪ್ರಕಾಶ್ ಹೇಳಿದ ಮಾತುಗಳು. ಇನ್ನು ಓಂ ಪ್ರಕಾಶ್ ಅಭಿಪ್ರಾಯದಂತೆ ಫೈನಲ್ ಗೆ ಪ್ರಥಮ್, ಕೀರ್ತಿ, ಮಾಳವಿಕಾ, ಮೋಹನ್, ರೇಖಾ ಬರಬಹುದು. ಕೀರ್ತಿ ವಿಜೇತರಾಗಬಹುದು. ಇದೆಲ್ಲವನ್ನು ಹೇಳಿಕೊಂಡ ಓಂ ಪ್ರಕಾಶ್, ಸುದೀಪ್ ಅವರಿಗೆ ಕೃತಜ್ಞತೆ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...