alex Certify
ಕನ್ನಡ ದುನಿಯಾ       Mobile App
       

Kannada Duniya

ಸೀಕ್ರೆಟ್ ರೂಂ ಸೇರಿದ ದಿವಾಕರ್, ರಹಸ್ಯ ಬಿಚ್ಚಿಟ್ಟ ಜೆ.ಎಸ್.

‘ಬಿಗ್ ಬಾಸ್’ ಮನೆಯಿಂದ ಹೊರ ಬಂದ ದಿವಾಕರ್ ಸೀಕ್ರೆಟ್ ರೂಂ ಸೇರಿಕೊಂಡಿದ್ದಾರೆ. ಸೀಕ್ರೆಟ್ ರೂಂನಲ್ಲಿದ್ದ ಜಯಶ್ರೀನಿವಾಸನ್(ಜೆ.ಎಸ್.) ಮನೆಯಿಂದ ಹೊರಗೆ ಬಂದಿದ್ದು, ಭಾನುವಾರದ ‘ಸೂಪರ್ ಸಂಡೇ ವಿತ್ ಸುದೀಪ’ ವೇದಿಕೆಯಲ್ಲಿ ಮನೆಯೊಳಗಿನ ಅನುಭವ ಹಂಚಿಕೊಂಡಿದ್ದಾರೆ.

ಮನೆಯೊಳಗೆ ಸದಸ್ಯರು ವಿವಿಧ ವಿಷಯಗಳ ಕುರಿತಾಗಿ ಚರ್ಚೆ ನಡೆಸಿದ್ದಾರೆ. ಕೃಷಿ ಅಡುಗೆ ಮನೆಯಿಂದ ದೂರವಿರುವ ಕುರಿತಾಗಿ ಮಾತನಾಡಿದ್ದಾರೆ. ಏನು ಮಾಡಿದ್ರೂ ಗೇಮ್ ಪ್ಲಾನ್ ಅಂತಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಚಂದನ್ ಬಳಿ ಮಾತನಾಡುತ್ತಿದ್ದ ನಿವೇದಿತಾ, ಕೇರ್ ಫುಲ್ ಆಗಿ ಆಡಬೇಕು. 3 ಸಲ ಕಳಪೆ ಬೋರ್ಡ್ ಬಂದಿದೆ ಎಂದು ಹೇಳಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಚಂದನ್, ತುಂಬಾ ಕೇರ್ ಫುಲ್ ಆಗಿದ್ದಕ್ಕೆ ಕಳಪೆ ಬೋರ್ಡ್ ಸಿಕ್ಕಿದೆ. ಟಾಸ್ಕ್ ಅರ್ಥಮಾಡಿಕೊಂಡು, ನಿನಗೆ ಬಂದ ಪಾತ್ರವನ್ನು ಉತ್ತಮವಾಗಿ ನಿರ್ವಹಿಸಬೇಕೆಂದು ಸಲಹೆ ನೀಡಿದ್ದಾರೆ. ರಿಯಾಜ್ ಅವರಿಗೆ ಪತ್ನಿಯಿಂದ ಹೊಸ ವರ್ಷದ ಶುಭಾಶಯಗಳ ಧ್ವನಿ ಮುದ್ರಿಕೆ ಕೇಳಿಸಲಾಗಿದೆ. ಈ ವೇಳೆ ಅವರು ಭಾವುಕರಾಗಿದ್ದಾರೆ.

‘ಕಿಚ್ಚನ್ ಟೈಮ್’ಗೆ ನಟಿಯರಾದ ರಂಜನಿ ರಾಘವನ್ ಮತ್ತು ಅದಿತಿ ಪ್ರಭುದೇವ್ ಅವರು ಬಂದಿದ್ದಾರೆ. ಸುದೀಪ್ ಅವರೊಂದಿಗೆ ವಿಶೇಷ ತಿನಿಸುಗಳನ್ನು ಮಾಡಿ ರುಚಿ ಸವಿದಿದ್ದಾರೆ. ಸುದೀಪ್ ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ, ರಂಜನಿ ಹಾಡುವ ಮೂಲಕ ಗಮನ ಸೆಳೆದರು. ಅಲ್ಲದೇ, ‘ರಾಜಹಂಸ’ ಚಿತ್ರದಲ್ಲಿ ಹಾಡಿರುವುದಾಗಿಯೂ ತಿಳಿಸಿದರು. ಸುದೀಪ್ ಕೂಡ ಹಾಡು ಹಾಡಿದ್ದು ವಿಶೇಷವಾಗಿತ್ತು.

ನಂತರದಲ್ಲಿ ‘ಬಿಗ್ ಬಾಸ್’ ವೇದಿಕೆಯಲ್ಲಿ ಕಾಣಿಸಿಕೊಂಡ ಜಯಶ್ರೀನಿವಾಸನ್ ಮನೆಯೊಳಗಿನ ಅನುಭವವನ್ನು ಹಂಚಿಕೊಂಡಿದ್ದಾರೆ. ಅಲ್ಲಿ ಕಳೆದ ಕ್ಷಣಗಳು, ಸಿಟ್ಟು, ಕೋಪ, ಟಾಸ್ಕ್ ಮೊದಲಾದವುಗಳ ಕುರಿತಾಗಿ ಮಾತನಾಡಿದ್ದಾರೆ. ಮನೆಯೊಳಗೆ ತಾವು ಕಳೆದ ಕ್ಷಣಗಳನ್ನು ನೋಡಿದ ಅವರು ಭಾವುಕರಾಗಿದ್ದಾರೆ. ಅವರ ತಾಯಿ ವೇದಿಕೆ ಮೇಲೆ ಬಂದಾಗ ಜಯಶ್ರೀನಿವಾಸನ್ ಕಣ್ಣಂಚಲ್ಲಿ ನೀರು ಬಂದಿತ್ತು. ಸುದೀಪ್ ಎದುರು ವಿಲನ್ ಆಗಿ ಆಕ್ಟ್ ಮಾಡಲು ಜಯಶ್ರಿನಿವಾಸನ್ ಮುಂದಾಗಿದ್ದು, ಹಾಸ್ಯಮಯವಾಗಿತ್ತು.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...