alex Certify
ಕನ್ನಡ ದುನಿಯಾ       Mobile App
       

Kannada Duniya

ಐಟಿ ವಿಚಾರಣೆ ಬಳಿಕ ಕಿಚ್ಚ ಸುದೀಪ್ ಹೇಳಿದ್ದೇನು ಗೊತ್ತಾ…?

ಕಳೆದ ವಾರ ಸ್ಯಾಂಡಲ್ ವುಡ್ ನಟರು, ನಿರ್ಮಾಪಕರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ದಾಖಲೆಗಳ ಪರಿಶೀಲನೆ ನಡೆಸಿದ್ದರು. ದಾಳಿಯ ವೇಳೆ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದು, ಅವುಗಳಿಗೆ ಸಂಬಂಧಿಸಿದಂತೆ ನಟರು, ನಿರ್ಮಾಪಕರನ್ನು ಐಟಿ ಕಚೇರಿಗೆ ಕರೆಸಿಕೊಂಡು ವಿಚಾರಣೆ ನಡೆಸಲಾಗಿದೆ.

ಅಂತೆಯೇ, ಇಂದು ನಟ ಕಿಚ್ಚ ಸುದೀಪ್ ಅವರು, ಕ್ವೀನ್ಸ್ ರಸ್ತೆಯಲ್ಲಿರುವ ಐಟಿ ಕಚೇರಿಗೆ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ. ವಿಚಾರಣೆ ಮುಗಿಸಿ ಹೊರ ಬಂದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಟಿ ಅಧಿಕಾರಿಗಳು ತನಿಖೆ ನಡೆಸಿದ ಸಂದರ್ಭದಲ್ಲಿ ಕೆಲವು ಹೇಳಿಕೆಗಳಿಗೆ ಸಹಿ ಪಡೆದುಕೊಂಡಿದ್ದು, ಅದರ ಬಗ್ಗೆ ವಿಚಾರಣೆಗೆ ಬಂದಿದ್ದೇನೆ. ಇನ್ನೂ 5 -6 ತಿಂಗಳ ಕಾಲ ವಿಚಾರಣೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಮೈಸೂರಿನಲ್ಲಿ ‘ಪೈಲ್ವಾನ್’ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾಗಲೇ ಐಟಿ ದಾಳಿ ನಡೆದಿತ್ತು. ತಾಯಿ ಒಬ್ಬರೇ ಮನೆಯಲ್ಲಿ ಇದ್ದ ಕಾರಣ ನಾನು ಬಂದಿದ್ದೆ. ಮತ್ತೆ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದ ಕಾರಣ, ವಿಚಾರಣೆಗೆ ಈಗ ಆಗಮಿಸಿದ್ದೇನೆ. ಇಂದು ಕೂಡ ‘ಸೈರಾ’ ಚಿತ್ರದ ಶೂಟಿಂಗ್ ಇತ್ತು. ಆದರೆ, ಚಿತ್ರ ತಂಡದವರ ಬಳಿ ಕೇಳಿಕೊಂಡು ಇಂದು ವಿಚಾರಣೆಗೆ ಆಗಮಿಸಿದ್ದೇನೆ. ಐಟಿ ಅಧಿಕಾರಿಗಳು ಮತ್ತೆ ವಿಚಾರಣೆಗೆ ಕರೆದರೆ ನಾನು ಹಾಜರಾಗುತ್ತೇನೆ ಎಂದು ಮಾಹಿತಿ ನೀಡಿದ್ದಾರೆ.

ನಾವು ತಪ್ಪೇ ಮಾಡದಿದ್ದರೆ, ಐಟಿ ಅಧಿಕಾರಿಗಳು ಆಮಂತ್ರಣ ಕೊಡಲು ಬರುತ್ತಾರೆಯೇ? ನಾನು ಅಳಿಲಿನಷ್ಟು ತಪ್ಪು ಮಾಡಿದ್ದೇನೆ. ತಪ್ಪನ್ನು ಸರಿಪಡಿಸಿಕೊಳ್ಳಲು ಇದೊಂದು ಎಚ್ಚರಿಕೆಯ ಸಂದೇಶವಾಗಿದೆ. ಬೇಕೆಂದೇ ನಾನು ತಪ್ಪು ಮಾಡಿಲ್ಲ. ಈ ಪ್ರಕರಣದಿಂದ ತಪ್ಪುಗಳನ್ನು ಸರಿ ಮಾಡಿಕೊಳ್ಳಬೇಕಿದೆ ಎಂದು ಅವರು ಹೇಳಿದ್ದಾರೆ.

ಸಾರ್ವಜನಿಕ ಜೀವನದಲ್ಲಿರುವವರನ್ನು ಪ್ರಶ್ನೆ ಮಾಡುವುದು ಸಹಜ. ನಾನು ಬೇರೆಯವರ ಬಗ್ಗೆ ಏನೂ ಹೇಳುವುದಿಲ್ಲ, ಬೇರೆಯವರು ನನ್ನ ಬಗ್ಗೆ ಹೇಳುವುದು ಬೇಡ ನಾನು ಸ್ಪಷ್ಟವಾಗಿ ಇದ್ದೇನೆ ಎಂದು ಸುದೀಪ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...