alex Certify
ಕನ್ನಡ ದುನಿಯಾ       Mobile App
       

Kannada Duniya

ಹೇಗಿದೆ ಸುದೀಪ್ ಹಾಲಿವುಡ್ ಸಿನಿಮಾ ತಯಾರಿ..?

sude-holywd

ಕನ್ನಡ, ಹಿಂದಿ, ತೆಲುಗು ಹಾಗೂ ತಮಿಳಿನಲ್ಲಿ ಕಮಾಲ್ ಮಾಡಿರುವ ಕಿಚ್ಚ ಸುದೀಪ್ ಇದೇ ಮೊದಲ ಬಾರಿಗೆ ಹಾಲಿವುಡ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದು, ಗಾಂಧಿನಗರದಲ್ಲಿ ಹಲ್ ಚಲ್ ಎಬ್ಬಿಸಿದೆ.

ಎಡ್ಡಿ ಆರ್ಯ ನಿರ್ದೇಶನದ ‘ರೈಸನ್’ ಸಿನಿಮಾದಲ್ಲಿ ಸುದೀಪ್ ಸೇನಾಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

‘ರೈಸನ್’ ಸೈನ್ಸ್ ಫಿಕ್ಷನ್ ಕತೆ ಒಳಗೊಂಡಿದೆ. ಅಮೆರಿಕದ ಪೆನ್ಸೆಲ್ವೆನಿಯಾದಲ್ಲಿ ಕಮ್ಯುನಿಟಿಯೊಂದು ವಾಸವಾಗಿರುತ್ತದೆ. ಅಲ್ಲಿ ಉಲ್ಕಾಪಾತವಾಗಿ ಅನೇಕರು ಸಾವು ಕಾಣುತ್ತಾರೆ. ರಾಸಾಯನಿಕವೊಂದು ಬಿಡುಗಡೆಯಾಗಿ ಜನ ಅಪಾಯಕ್ಕೆ ಸಿಲುಕುತ್ತಾರೆ. ಅವರನ್ನು ರಕ್ಷಿಸುವ ಪಾತ್ರದಲ್ಲಿ ಸುದೀಪ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಈಗಾಗಲೇ ಸ್ಕ್ರಿಪ್ಟ್ ಕೆಲಸ ಪೂರ್ಣಗೊಳಿಸಿ ಚಿತ್ರೀಕರಣಕ್ಕೆ ಪೂರ್ವ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಡಿಸೆಂಬರ್ ಅಂತ್ಯಕ್ಕೆ ‘ರೈಸನ್’ ಶೂಟಿಂಗ್ ಆರಂಭವಾಗಲಿದೆ ಎಂದು ಹೇಳಲಾಗಿದೆ.

ಸುದೀಪ್ ಸದ್ಯ ‘ದಿ ವಿಲನ್’ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು, ಇದಾದ ಬಳಿಕ ಒಪ್ಪಿಕೊಂಡ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದರೊಂದಿಗೆ ಹಾಲಿವುಡ್ ಚಿತ್ರಕ್ಕೂ ರೆಡಿಯಾಗಲಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...