alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿದೆ ಸುದೀಪ್ ‘ಹೆಬ್ಬುಲಿ’ಯ ಮತ್ತೊಂದು ಸುದ್ದಿ

hebuli-sud

ಕಿಚ್ಚ ಸುದೀಪ್ ಅಭಿನಯದ ‘ಹೆಬ್ಬುಲಿ’ ಸೆಟ್ಟೇರಿದಾಗಿನಿಂದಲೂ, ಸಖತ್ ಸೌಂಡ್ ಮಾಡುತ್ತಿದೆ.

ಈಗಾಗಲೇ ‘ಹೆಬ್ಬುಲಿ’ ಆಗಮನಕ್ಕೆ ಕೌಂಟ್ ಡೌನ್ ಶುರುವಾಗಿದೆ. ಸ್ಯಾಂಡಲ್ ವುಡ್ ಅಂಗಳದಲ್ಲಿ ಆರಂಭದಿಂದಲೂ ಕುತೂಹಲ ಮೂಡಿಸಿದ ಈ ಚಿತ್ರ ಸೆನ್ಸಾರ್ ಗೆ ರೆಡಿಯಾಗಿದ್ದು, ಶಿವರಾತ್ರಿಗೆ ತೆರೆಗೆ ಬರಲಿದೆ.

ಸುದೀಪ್, ಮೊದಲ ಬಾರಿಗೆ ಪ್ಯಾರಾ ಕಮಾಂಡೋ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ರವಿಚಂದ್ರನ್ 2 ನೇ ಬಾರಿಗೆ ಸುದೀಪ್ ಗೆ ಜೊತೆಯಾಗಿದ್ದಾರೆ. ಅಮಲಾ ಪೌಲ್ ಇದೇ ಮೊದಲ ಬಾರಿಗೆ ಕನ್ನಡ ಚಿತ್ರದಲ್ಲಿ ನಟಿಸಿದ್ದಾರೆ. ಕೃಷ್ಣ ನಿರ್ದೇಶನ, ರಘುನಾಥ್, ಉಮಾಪತಿ ಶ್ರೀನಿವಾಸ್ ನಿರ್ಮಾಣ, ಅರ್ಜುನ್ ಜನ್ಯ ಸಂಗೀತ, ಕರುಣಾಕರ್ ಛಾಯಾಗ್ರಹಣ ಚಿತ್ರಕ್ಕಿದೆ.

ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಟ್ರೇಲರ್ ಗೂ ಮೊದಲೇ, ಚಿತ್ರದ 2 ವಿಡಿಯೋ ಸಾಂಗ್ ರಿಲೀಸ್ ಮಾಡಲಾಗಿತ್ತು. ಎರಡೂ ಹಾಡುಗಳು ಕಮಾಲ್ ಮಾಡಿವೆ. ಈ ಮೊದಲು ಹಂತ ಹಂತವಾಗಿ ಸುದ್ದಿ ಮಾಡುತ್ತಿದ್ದ ‘ಹೆಬ್ಬುಲಿ’ ಈಗ ಹಾಡುಗಳಿಂದಾಗಿಯೇ ಹೊಸ ಕ್ರೇಜ್ ಸೃಷ್ಠಿಸಿದೆ.

ಟೈಟಲ್ ಸಾಂಗ್ ಜೊತೆಗೆ ‘ಸುಂದರಿ..’ ಡ್ಯುಯೆಟ್ ಸಾಂಗ್ ಅಭಿಮಾನಿಗಳನ್ನು ಸೆಳೆದಿದೆ. ಕಿಚ್ಚನ ಸ್ಟೈಲ್, ಅಮಲಾ ಪೌಲ್ ಗ್ಲಾಮರಸ್ ಲುಕ್ ಗಮನಸೆಳೆದಿದೆ.

ಇದೇ ಸಂದರ್ಭದಲ್ಲಿ ಮೇಕಿಂಗ್ ಹಿಂದಿರುವ ಬಿಗ್ ಸೀಕ್ರೆಟ್ ಹೊರ ಬಿದ್ದಿದೆ. ವಿಶೇಷವಾದ 6 ಸೆಟ್ ಗಳಲ್ಲಿ 3 ಗೆಟಪ್ ಗಳಲ್ಲಿ, 2 ಸಾಂಗ್ ಶೂಟಿಂಗ್ ಮಾಡಲಾಗಿದೆ. ಇವೆರಡು ಹಾಡಿಗೆ ಸುಮಾರು 2 ಕೋಟಿ ರೂ ಖರ್ಚಾಗಿದೆ. 3 ಶೇಡ್ ಗಳಲ್ಲಿ ಸುದೀಪ್ ಕಾಣಿಸಿಕೊಂಡಿದ್ದು, ಹರ್ಷ ನೃತ್ಯ ನಿರ್ದೇಶನ ಮಾಡಿದ್ದಾರೆ. ಒಂದೇ ಹೇರ್ ಸ್ಟೈಲ್ ನಲ್ಲಿ ಸುದೀಪ್ 5 ಸ್ಟೈಲಿಶ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ‘ಹೆಬ್ಬುಲಿ’ ಕ್ರೇಜ್ ಜೋರಾಗತೊಡಗಿದ್ದು, ಅಭಿಮಾನಿಗಳು ಚಿತ್ರ ವೀಕ್ಷಿಸಲು ತುದಿಗಾಲಲ್ಲಿ ಕಾಯುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...