alex Certify
ಕನ್ನಡ ದುನಿಯಾ       Mobile App
       

Kannada Duniya

ಮಧ್ಯರಾತ್ರಿಯೇ ‘ಹೆಬ್ಬುಲಿ’ ಘರ್ಜನೆ: ಮುಗಿಬಿದ್ದ ಫ್ಯಾನ್ಸ್

kicha-s

ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ‘ಹೆಬ್ಬುಲಿ’ ರಾಜ್ಯಾದ್ಯಂತ ಗ್ರ್ಯಾಂಡ್ ರಿಲೀಸ್ ಆಗಿದೆ.

ಬೆಂಗಳೂರು, ದಾವಣಗೆರೆ ಮೊದಲಾದ ಕಡೆಗಳಲ್ಲಿ ಮಧ್ಯರಾತ್ರಿ, ಕೆಲವೆಡೆ ಬೆಳಗಿನ ಜಾವದಿಂದಲೇ ಪ್ರದರ್ಶನ ಆರಂಭವಾಗಿದೆ.

ದಾವಣಗೆರೆಯ ಅಶೋಕ, ಪುಷ್ಪಾಂಜಲಿ ಚಿತ್ರಮಂದಿರಗಳಲ್ಲಿ ಮಧ್ಯರಾತ್ರಿ ಟಿಕೆಟ್ ಗಾಗಿ ಅಭಿಮಾನಿಗಳ ನೂಕು ನುಗ್ಗಲು ಉಂಟಾಗಿ, ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.

ಬಳಿಕ ರಾತ್ರಿ 12.30 ಕ್ಕೆ ಚಿತ್ರ ಪ್ರದರ್ಶನ ಆರಂಭವಾಗಿದೆ. ಬೆಂಗಳೂರಿನ ಕೆಲವು ಚಿತ್ರಮಂದಿರಗಳಲ್ಲಿ ಬೆಳಗಿನ ಜಾವ 4 ಗಂಟೆಗೆ ಶೋ ಆರಂಭವಾಗಿದ್ದು, ಅಭಿಮಾನಿಗಳು ‘ಹೆಬ್ಬುಲಿ’ ನೋಡಲು ಮುಗಿಬಿದ್ದಿದ್ದಾರೆ.

ಸುದೀಪ್ ಅಭಿಮಾನಿಗಳು ಚಿತ್ರ ಪ್ರದರ್ಶನ ಆರಂಭವಾಗುವ ಮೊದಲು ಕಟೌಟ್ ಗೆ ಹಾರ ಹಾಕಿ, ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಥಿಯೇಟರ್ ಒಳಗೂ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದ್ದು, ಸುದೀಪ್ ತೆರೆ ಮೇಲೆ ಕಾಣಿಸಿಕೊಂಡ ಕೂಡಲೇ ಅಭಿಮಾನಿಗಳು ಹುಚ್ಚೆದ್ದು ಕುಣಿದಾಡಿದ್ದಾರೆ. ರಾಜ್ಯಾದ್ಯಂತ ‘ಹೆಬ್ಬುಲಿ’ ಹವಾ ಜೋರಾಗತೊಡಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...